ಬ್ಯಾಡಗಿ: ದೈವಿ ಸ್ವರೂಪಿಯಾದ ಪಂಡಿತ ಡಾ.ಪುಟ್ಟರಾಜ ಗವಾಯಿಗಳು ಸಮಾಜದಲ್ಲಿ ಯಾರಿಗೂ ಬೇಡವಾಗಿದ್ದ ಅಂಧಮಕ್ಕಳಿಗೆ ಅನ್ನ, ಆಶ್ರಯ ಹಾಗೂ ಸಂಗೀತದ ಜ್ಞಾನವನ್ನು ಧಾರೆ ಎರೆಯುವ ಮೂಲಕ ತ್ರಿವಿಧ ದಾಸೋಹಿಗಳಾಗಿದ್ದರು ಎಂದು ಪುರಸಭೆ ಮುಖ್ಯಾಧಿಕಾರಿ ವಿ.ಎಂ.ಪೂಜಾರ ಹೇಳಿದರು. ಪಟ್ಟಣದಲ್ಲಿ ಗಾನಯೋಗಿ ಕಲಾ ತಂಡದಿAದÀ ಬುಧವಾರ ಏರ್ಪಡಿಸಿದ್ದ ಪಂಡಿತ ಡಾ.ಪುಟ್ಟರಾಜ ಕವಿ ಗವಾಯಿಗಳ 10ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವತಃ ಅಂಧರಾಗಿದ್ದ ಪುಟ್ಟರಾಜರು ವೀರೇಶ್ವರ ಪುಣ್ಯಾಶ್ರಮವನ್ನು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸ್ಥಾಪಿಸುವ ಮೂಲಕ ಅಂಧರಿಗೆ ಆಶ್ರಯ ನೀಡಿದ್ದರು ಎಂದರು. ಗಾನಯೋಗಿ ಕಲಾತಂಡದ ಜಿಲ್ಲಾ ಘಟಕದ ಅಧ್ಯಕ್ಷ ವೀರಭದ್ರಗೌಡ ಹೊಮ್ಮರಡಿ ಮಾತನಾಡಿ ಕೋವಿಡ್ ಹಿನ್ನೆಲೆಯಲ್ಲಿ ಪಂಡಿತ ಪುಟ್ಟರಾಜರ ಪುಣ್ಯಸ್ಮರಣೋತ್ಸವವನ್ನು ಅತ್ಯಂತ ಸರಳವಾಗಿ ಆಚರಿಸಲಾಗುತ್ತಿದೆ. ಪುಟ್ಟರಾಜರ ಹೆಸರಿನಲ್ಲಿ ಕಲಾ ತಂಡವನ್ನು ಸ್ಥಾಪಿಸಿ ಸಂಗೀತ ಪ್ರೀಯರಿಗೆ ಉಚಿತವಾಗಿ ಸಂಗಿತ ರಸದೌತನವನ್ನು ಉಣಬಡಿಸಲು ಹಗಲಿರುಳು ಶ್ರಮಿಸಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಕಲಾವಿದರಾದ ಮಾಲತೇಶ ದೇವಗಿರಿ, ನಾಗರಾಜ ರಾಮಣ್ಣನವರ, ಶ್ರೀಕಾಂತ ಉಜನಿ, ದೇವರಾಜ ಹುಡೇದ, ಮಂಜುನಾಥ ಮುಂಡರಗಿ, ಸುಧೀರ ಹವಳದ, ಮುತ್ತಣ್ಣ ಕುಬಸದ, ಮೈನುದ್ದೀನ ಕಾಟೇನಹಳ್ಳಿ ಹಾಗೂ ಇತರರು ಉಪಸ್ಥಿತರಿದ್ದರು.