ಬೆಳಗಾವಿ: ಜಿಲ್ಲೆಯ ಗೋಕಾಕ ತಾಲೂಕಿನ ಮಮದಾಪುರ ಗ್ರಾಮದ ಶ್ರೀ ಮೌನ ಮಲ್ಲಿಕಾರ್ಜುನ ಶಿವಯೋಗಿಗಳ ಮಠದಲ್ಲಿ ಅಧಿಕ ಮಾಸ ಹಾಗೂ ಶರನ್ನವರಾತ್ರಿಯ ಶ್ರೀ ದೇವಿ ಪುರಾಣ ಮಂಗಲೋತ್ಸವ ಮತ್ತು 262ನೇಯ ಬಸವ ಸ್ಮತಿ ಮಾಸಿಕ ಶಿವನುಭವಗೋಷ್ಠಿ ಮತ್ತು ಶ್ರೀ ಫಕೀರೇಶ್ವರ ಜಗದ್ಗುರುಗಳ ಅಡ್ಡಪಲಕ್ಕಿ ಮಹೋತ್ಸವ ಇಂದು ಶನಿವಾರ ದಿನಾಂಕ 31 ರಂದು ಸಾಯಂಕಾಲ 4 ಗಂಟೆಗೆ ಜರುಗಲಿದೆ. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶಿರಹಟ್ಟಿಯ ಶ್ರೀ ಫಕ್ಕಿರ ಸಿದ್ಧರಾಮ ಮಹಾಸ್ವಾಮಿಗಳು ವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ಶಿವರುದ್ರ ಶಿವಾಚಾರ್ಯ ಮಹಾಸ್ವಾಮಿಜೀ, ಗುರುಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಜೀ, ಶಿವರುದ್ರ ಶರಣರು, ವೀರಸಂಗಯ್ಯಾ ಸ್ವಾಮಿಗಳು, ಮಂಜುನಾಥ ಶರಣರು ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮಕ್ಕೆ ಬರುವ ಭಕ್ತರು ಕೋರೊನಾ ಹಿನ್ನೆಲೆಯಲ್ಲಿ ಸರ್ಕಾರದ ನೀತಿ, ನಿಯಮಾವಳಿ ಅನುಸಾರ ಕಡ್ಡಾಯವಾಗಿ ಮಾಸ್ಕ್ ಧರಿಸುವುದರ ಜೊತೆಗೆ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಮಠದ ಸದ್ಭಕ್ತರಾದ ಶಿವಾನಂದ ಮುನೇಶ್ವರಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.