ವೀರ ಮದಕರಿ ಚಿತ್ರದ ನಿರ್ದೇಶಕ ದಿನೇಶ್ ಗಾಂಧಿ ಇನ್ನಿಲ್ಲ

  • 15 Jan 2024 , 3:08 AM
  • Bengaluru
  • 111

ಬೆಂಗಳೂರು: ಸ್ಯಾಂಡಲ್ ವುಡ್ ಹೆಸರಾಂತ ನಿರ್ದೇಶಕ, ನಟ ದಿನೇಶ್ ಗಾಂಧಿ (52) ಇಂದು ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರು ಸುದೀಪ್ ಅಭಿನಯದ 'ವೀರ ಮದಕರಿ' , ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಮಲ್ಲಿಕಾರ್ಜುನ ಹಾಗೂ ಹೂ ಚಿತ್ರವನ್ನು ನಿರ್ಮಿಸಿದರು. ನಟ ಸಿದ್ಧಾಂತ ಅಭಿನಯದ ಛತ್ರಪತಿ ಚಿತ್ರವನ್ನ ನಿರ್ದೇಶನ ಮಾಡಿದ್ದು ಕೂಡ ಇವರೇ, ಈಗ ಮತ್ತೊಂದು ಮಕ್ಕಳ ಚಿತ್ರ ನಿರ್ದೇಶನ ಮಾಡಲು ಸಿದ್ಧವಾಗಿದ್ದರು. ಆದರೆ ಕಾಲ ಇವರನ್ನು ಬಲಿಪಡೆಯಿತು ಇವರು ಪತ್ನಿ, ಪುತ್ರರನ್ನು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕೂಡ ಸಲ್ಲಿಸಿದರು. ಇವರ ಅಕಾಲಿಕ ಮರಣದಿಂದ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ.

Read All News