ಕರಾಳ ದಿನ ಆಚರಿಸುವ ಎಂಇ ಎಸ್ ಗೆ ಟಾಂಗ್ ನೀಡಿದ ಸಚಿವ ರಮೇಶ ಜಾರಕಿಹೊಳಿ

  • 14 Jan 2024 , 9:58 PM
  • Belagavi
  • 102

ಬೆಳಗಾವಿ: ಖಾನಾಪುರದ ಮಾಜಿ ಶಾಸಕ ಅರವಿಂದ ಪಾಟೀಲ ಈಗ ಮಹಾರಾಷ್ಟ್ರ ಏಕೀಕರಣ ಸಮಿತಿಯಲ್ಲಿಲ್ಲ. ಅವರನ್ನು ಶೀಘ್ರವೇ ಬಿಜೆಪಿಗೆ ಸೇರಿಸಿಕೊಳ್ಳುತ್ತೇವೆ ಎಂದು ರಾಜ್ಯ ಜಲಸಂಪನ್ಮೂಲ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ರಮೇಶ ಜಾರಕಿಹೊಳಿ ಹೇಳಿದ್ದಾರೆ.

logintomyvoice

ನಗರದಲ್ಲಿಂದು 65ನೇ ಕರ್ನಾಟಕ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರ ಸರಕಾರ ಕನ್ನಡ ರಾಜ್ಯೋತ್ಸವದಂದು ಕರಾಳ ದಿನ ಘೋಷಿಸಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಅದಕ್ಕೆಲ್ಲ ಮಹತ್ವ ಕೊಡೋದು ಬೇಡಾ, ಅವರದ್ದು ಅವರು ಮಾಡಿಕೊಳ್ಳಲಿ, ನಮ್ಮದು ನಾವು ಮಾಡುತ್ತೇವೆ.

ಅವರೇನು ಒಂದು ಮೂಲೆಯಲ್ಲಿ ಆಚರಿಸಿಕೊಂಡು ಹೊಗುತ್ತಾರೆ ಅದಕ್ಕೆಲ್ಲ ಪ್ರಚಾರ ಕೊಡುವ ಅವಶ್ಯಕತೆಯಿಲ್ಲ, ನಾವು ಭರ್ಜರಿಯಾಗಿ ರಾಜೋತ್ಸವ ಆಚರಣೆ ಮಾಡೋಣ ನಮ್ಮ ಸರ್ಕಾರ ಯಾವತ್ತು ಕನ್ನಡ ಪರವಾಗಿದೆ ಕನ್ನಡ ನಾಡಿನ, ಕನ್ನಡಿಗರ ಹಿತ ಬಲಿಕೊಡುವ ಪ್ರಶ್ನೆಯೇ ಇಲ್ಲ ಕನ್ನಡನಾಡು-ನುಡಿ,ನೆಲ-ಜಲ ಸಂರಕ್ಷಣೆಗೆ ಸರಕಾರ ಸದಾ ಬದ್ಧವಾಗಿದೆ ಎಂದರು.

Read All News