ಸರಳ ಪದ್ಧತಿಗೆ ಸಾಕ್ಷಿಯಾದ 65ನೇ ಕನ್ನಡ ರಾಜ್ಯೋತ್ಸವ

  • 14 Jan 2024 , 11:49 PM
  • Haveri
  • 96

ರಾಣೇಬೆನ್ನೂರ: ನಗರದ ಸ್ಟೇಷನ್ ರಸ್ತೆ ಕರ್ನಾಟಕ ಸಂಘದಲ್ಲಿ 65ನೇ ಕನ್ನಡ ರಾಜ್ಯೋತ್ಸವವನ್ನು ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಕರ್ನಾಟಕ ಸಂಘ ವತಿಯಿಂದ ಆಚರಿಸಲಾಯಿತು. ಶಾಸಕ ಅರುಣಕುಮಾರ ಪೂಜಾರ ಧ್ವಜಾರೋಹಣ ನೆರವೇರಿಸಿದರು. ತಹಸೀಲ್ದಾರ ಬಸನಗೌಡಕೋಟೂರ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಕೊರೊನಾ ಹಿನ್ನೆಲೆಯಲ್ಲಿ ಮೆರವಣಿಗೆ, ಪ್ರಭಾತ ಫೇರಿಯಿಲ್ಲದೆ ಕೊರೋನಾ ಮಹಾಮಾರಿಯಿಂದಾಗಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ಗಳನ್ನು ಧರಿಸುವುದರ ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಈ ಸಲ ಸರಳವಾಗಿ ರಾಜ್ಯೋತ್ಸವ ಆಚರಣೆ ನಡೆಯಿತು. ಈ ಸಂದರ್ಭದಲ್ಲಿ ಕರ್ನಾಟಕ ಸಂಘದ ಅಧ್ಯಕ್ಷ ಸಂಜೀವ ಶಿರಹಟ್ಟಿ, ಉಪ ತಹಸೀಲ್ದಾರ ಎಂ.ಎನ್.ಹಾದಿಮನಿ, ಕಸಾಪ ಅಧ್ಯಕ್ಷೆ ಎ.ಬಿ.ರತ್ನಮ್ಮ, ಕೆ.ಎನ್.ಷಣ್ಮುಖ, ಶ್ರೀನಿವಾಸ ಏಕಬೋಟೆ, ತಾಪಂ ಇಒ ಮಲ್ಲಾಡದ, ಪೌರಾಯುಕ್ತಡಾ.ಮಹಾಂತೇಶ, ತಾಪಂ ಸಹಾಯಕ ನಿರ್ದೇಶಕ ಅಶೋಕ ನಾರಜ್ಜಿ, ವ್ಯವಸ್ಥಾಪಕ ಬಸವರಾಜ ಶಿಡೇನೂರು, ಸಿಪಿಐ ಎಂ.ಐ.ಗೌಡಪ್ಪಳವರ, ಟಿಎಚ್‌ಒಡಾ.ಸಂತೋಷ, ಪಿಎಸ್‌ಐ ಪ್ರಭು ಕೆಳಗಿನಮನಿ, ನಿತ್ಯಾನಂದ ಕುಂದಾಪುರ, ಪ್ರಕಾಶ ಕುಲಕರ್ಣಿ, ಸತೀಶ ಕುಲಕರ್ಣಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Read All News