ರಾಣೇಬೆನ್ನೂರು ನಗರಸಭೆಯಲ್ಲಿ ಅರಳಿದ ಕಮಲ

  • 1 Jan 2024 , 4:13 AM
  • Haveri
  • 111

ರಾಣೇಬೆನ್ನೂರ: ಸುಮಾರು ಎರಡು ವರ್ಷದ ನಂತರ ಸ್ಥಳೀಯ ನಗರಸಭೆಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ನಿರೀಕ್ಷೆಯಂತೆಯೇ ಭಾನುವಾರ ನಡೆದ ಚುನಾವಣೆಯಲ್ಲಿ ಕಮಲ ಅರಳಿತು. ಅಧ್ಯಕ್ಷೆಯಾಗಿ ರೂಪಾ ಚಿನ್ನಕಟ್ಟಿ, ಉಪಾಧ್ಯಕ್ಷೆಯಾಗಿ ಕಸ್ತೂರಿ ಚಿಕ್ಕಬಿದರಿ ಆಯ್ಕೆಯಾದರು. ಬೆಳಗ್ಗೆ 11ಕ್ಕೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾದ ತಕ್ಷಣ ಕಾಂಗ್ರೆಸ್ ಪಕ್ಷದ ಚಂಪಕ ರಮೇಶ ಬಿಸಲಹಳ್ಳಿ ಅಧ್ಯಕ್ಷ ಸ್ಥಾನಕ್ಕೆ ಮತ್ತು ನೀಲಮ್ಮ ಮಾಕನೂರ ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣಾಧಿಕಾರಿ ದಿಲೀಪ ಸಸಿ ಅವರಿಗೆತಮ್ಮ ನಾಮಪತ್ರಗಳನ್ನು ಸಲ್ಲಿಸಿದರು. ಸ್ವಲ್ಪ ಹೊತ್ತಿನ ನಂತರ ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ರೂಪಾ ರಾಘವೇಂದ್ರ ಚಿನ್ನಿಕಟ್ಟಿ ಮತ್ತು ಉಪಾಧ್ಯಕ್ಷೆ ಸ್ಥಾನಕ್ಕೆ ಕಸ್ತೂರಿ ಸಿದ್ಧು ಚಿಕ್ಕಬಿದರಿ ನಾಮಪತ್ರ ಸಲ್ಲಿಸಿದರು. ಮಧ್ಯಾಹ್ನ 1.15ಕ್ಕೆ ನಾಮಪತ್ರ ವಾಪಸಾತಿ ಸಮಯದ ನಂತರ ನಡೆದ ಚುನಾವಣೆಯಲ್ಲಿ 28-10 ಮತಗಳ ಅಂತರದಿAದ ಬಿಜೆಪಿಯ ರೂಪಾಚಿನ್ನಿಕಟ್ಟಿ ಅಧ್ಯಕ್ಷರಾಗಿಯೂ ಹಾಗೂ ಕಸ್ತೂರಿ ಚಿಕ್ಕಬಿದರಿ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಮತದಾನ ಪ್ರಕ್ರಿಯೆಯಲ್ಲಿ ಸಂಸದ ಶಿವಕುಮಾರ ಉದಾಸಿ, ಶಾಸಕ ಅರುಣಕುಮಾರ ಪೂಜಾರ, ವಿಧಾನ ಪರಿಷತ್ ಸದಸ್ಯ ಆರ್.ಶಂಕರ್ ಭಾಗವಹಿಸಿ ಬಿಜೆಪಿ ಅಭ್ಯರ್ಥಿಗಳ ಪರ ಮತ ಚಲಾಯಿಸಿದರು. ಕೆಪಿಜೆಪಿಯ 10 ಸದಸ್ಯರ ಪೈಕಿ ನಿಂಗರಾಜ ಕೋಡಿಹಳ್ಳಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ಚಲಾಯಿಸಿದರೆ ಉಳಿದ 9 ಸದಸ್ಯರು ಬಿಜೆಪಿ ಅಭ್ಯರ್ಥಿಗಳಿಗೆ ಮತ ಚಲಾಯಿಸಿದರು. ಫಲಿತಾಂಶ ಪ್ರಕಟವಾದ ನಂತರ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಸಂಸದ ಶಿವಕುಮಾರ ಉದಾಸಿ, ಮುಂದಿನ ದಿನಗಳಲ್ಲಿ ನಗರದ ಅಭಿವೃದ್ಧಿಗೆ ಕೈ ಜೋಡಿಸುತ್ತೇನೆ. ನಗರದಲ್ಲಿ ಈಗಾಗಲೇ ಅಮೃತ ಯೋಜನೆಯಡಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿದ್ದು ನಗರಸಭೆ ಸದಸ್ಯರು ಕಾಮಗಾರಿಗಳ ಗುಣಮಟ್ಟದ ಬಗ್ಗೆ ವಿಶೇಷ ಗಮನಹರಿಸಬೇಕು. ಚುನಾವಣೆ ನೀತಿ ಸಂಹಿತೆ ಕೊನೆಗೊಂಡ ನಂತರ ಗುತ್ತಲ ರಸ್ತೆರೇಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ಶೀಘ್ರವಾಗಿ ಪ್ರಾರಂಭಿಸಲಾಗುವುದು. ಇದಕ್ಕೆ ಸಂಬAಧಿಸಿದAತೆ ರೇಲ್ವೆ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ್ದೇನೆ ಎಂದರು. ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ಪಕ್ಷದ ತೀರ್ಮಾನದಂತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಮಾರ್ಗದರ್ಶನ, ಸಂಸದ ಶಿವಕುಮಾರ ಉದಾಸಿ, ವಿಧಾನ ಪರಿಷತ್ ಸದಸ್ಯ ಆರ್.ಶಂಕರ್ ಬೆಂಬಲದಿAದ ಪಕ್ಷವು ನಗರಸಭೆಯಲ್ಲಿ ಅಧಿಕಾರ ಗಳಿಸುವಲ್ಲಿ ಯಶಸ್ವಿಯಾಗಿದೆ. ಮುಂದಿನ ದಿನಗಳಲ್ಲಿ ನಗರದ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡಿ ದೇಶದಲ್ಲಿಯೇ ಮಾದರಿ ನಗರವನ್ನಾಗಿಸಲು ಶ್ರಮಿಸಲಾಗುವುದು ಎಂದರು. ವಿಧಾನ ಪರಿಷತ್ ಸದಸ್ಯ ಆರ್.ಶಂಕರ್ ಮಾತನಾಡಿ, ಬಿಜೆಪಿ ಮತ್ತು ಕೆಪಿಜೆಪಿ ಒಂದಾಗಿ ನಗರ ಸಭೆಯಲ್ಲಿ ಅಧಿಕಾರಕ್ಕೆ ಬಂದಿದ್ದೇವೆ. ಈಗಾಗಲೇ ಕೆಪಿಜೆಪಿ ಸರ್ವ ಸದಸ್ಯರ ಜತೆಯಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ನಗರದ ಅಭಿವೃದ್ಧಿಗೆ ಸಮರ್ಪಕ ಅನುದಾನವನ್ನು ಬಿಡುಗಡೆ ಮಾಡುವಂತೆ ಕೋರಿದ್ದೇವೆ. ಪಕ್ಷದಲ್ಲಿ ಯಾವುದೇ ಒಡಕುಗಳಿಲ್ಲ ಎಲ್ಲರೂ ಒಗ್ಗಟ್ಟಾಗಿದ್ದೇವೆ. ಎಲ್ಲರೂ ಜೊತೆಗೂಡಿ ಪಕ್ಷವನ್ನು ನಗರಸಭೆ ಅಧಿಕಾರಕ್ಕೆ ತಂದಿದ್ದೇವೆ ಎಂದರು. ಈ ಸಂದರ್ಭದಲ್ಲಿ ಬಿಜೆಪಿ ನೇಕಾರ ಪ್ರಕೋಷ್ಠ ರಾಜ್ಯ ಸಂಚಾಲಕ ಡಾ.ಬಸವರಾಜ ಕೇಲಗಾರ, ಜಿಲ್ಲಾಧ್ಯಕ್ಷ ಸಿದ್ಧರಾಜ ಕಲಕೋಟಿ, ನಗರ ಘಟಕದಅಧ್ಯಕ್ಷ ದೀಪಕ ಹರಪನಹಳ್ಳಿ, ತಾಲೂಕ ಘಟಕದ ಅಧ್ಯಕ್ಷ ಬಸವರಾಜ ಕೇಲಗಾರ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ಮಾಜಿ ಜಿಪಂ ಅಧ್ಯಕ್ಷ ಸಂತೋಷ ಪಾಟೀಲ, ಶಿವಕುಮಾರ ಮುದ್ದಪ್ಪಳವರ ಹಾಗೂ ನಗರಸಭೆ ಬಿಜೆಪಿ ಮತ್ತು ಕೆಪಿಜೆಪಿ ಸದಸ್ಯರು ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.

Read All News