ಕೊರೋನಾ ವಾರಿಯರ್ಸ್ ವೀರೇಶ್ ಕಿವಡಸಣ್ಣವರ್ ಗೆ ರಾಜ್ಯೋತ್ಸವ ಪ್ರಶಸ್ತಿ

  • 10 Jan 2024 , 5:06 PM
  • Belagavi
  • 290

ಬೆಳಗಾವಿ: ಸಮರ್ಥನಂ ಅಂಧ ಮಕ್ಕಳ ಸಂಸ್ಥೆ ಮತ್ತು ಸಮೃದ್ಧಿ ಸೇವಾ ಸಂಸ್ಥೆಯ ಮುಖ್ಯಸ್ಥ ವೀರೇಶ ಕಿವಡಸಣ್ಣವರ್ ಅವರಿಗೆ ಬೆಳಗಾವಿ ಜಿಲ್ಲಾಡಳಿತ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಕೊರೋನಾ ವಾರಿಯರ್ಸ್ ಪ್ರಶಸ್ತಿಯನ್ನುನೀಡಿ ಗೌರವಿಸಿದೆ.

logintomyvoice

ಕೋವಿಡ್ -19 ರ ಸಂಕಷ್ಟದ ಸಂದರ್ಭದಲ್ಲಿ ವೀರೇಶ ಕಿವಡಸಣ್ಣವರ್ ಯಾವುದೇ ಪ್ರಚಾರ ಬಯಸದೆ ಸದ್ದಿಲ್ಲದೆ ಕೊರೋನಾ ವಾರಿಯರ್ ಆಗಿ ಕೆಲಸ ಮಾಡಿದ್ದಾರು. ಬೆಳಗಾವಿ ನಗರ ಮತ್ತು ಗ್ರಾಮೀಣ ಪ್ರದೇಶದ ಪ್ರತಿ ಮೂಲೆ ಮೂಲೆಗೆ ತೆರಳಿ ಬಡ ಜನರಿಗೆ ಅಗತ್ಯ ಸಾಮಗ್ರಿಗಳನ್ನು ವಿತರಿಸುವುದರ ಜೊತೆಗೆ ಕೊರೋನಾ ಕುರಿತು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲು ಅರಿವು ಮೂಡಿಸುವ ಕೆಲಸವನ್ನು ವೀರೇಶ ಮಾಡಿದ್ದರು.

logintomyvoice

ಜಿಲ್ಲಾಡಳಿತ, ಭಾರತೀಯ ಜನತಾ ಪಾರ್ಟಿ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘಗಳ ಜೊತೆ ಸೇರಿಕೊಂಡು ಹಗಲಿರುಳು ಸೇವೆ ಮಾಡಿದ್ದಾರೆ. ಅವರ ಈ ಎಲ್ಲ ಕಾರ್ಯಗಳನ್ನು ಪರಿಗಣಿಸಿ ಜಿಲ್ಲಾಡಳಿತ ಅವರನ್ನು ಈ ಭಾರಿ ಪ್ರಶಸ್ತಿಗೆ ಆಯ್ಕೆ ಮಾಡಿದೆ. ವೀರೇಶ ಕಿವಡಸಣ್ಣವರ್ ಕಳೆದ 25 ವರ್ಷಗಳಿಂದ ಸಮೃದ್ಧಿ ಸೇವಾಸಂಸ್ಥೆ ಮತ್ತು ಸಮರ್ಥನಂ ಅಂಧ ಮಕ್ಕಳ ಸಂಸ್ಥೆಯ ಮೂಲಕ ತಮನ್ನು ತಾವು ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ.

Read All News