ಹುಕ್ಕೇರಿ: ತಾಲೂಕಿನ ಹಿಡಕಲ್ ಡ್ಯಾಮ್ ಸಮೀಪದ ಹೊಸಪೇಟ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ಮಂಗಳವಾರ ದಿ. 3 ರಂದು ಹುಕ್ಕೇರಿ ಶಾಸಕ ಉಮೇಶ ಕತ್ತಿಯವರು ಬೇಟಿ ನೀಡಿ ಸಾರ್ವಜನಿಕರ ಕುಂದುಕೊರತೆಗಳನ್ನು ವಿಚಾರಿಸಿದರು. ಹಿಡಕಲ್ ಡ್ಯಾಮಿನ ಕರ್ನಾಟಕ ನೀರಾವರಿ ನಿಗಮದ ವ್ಯಾಪ್ತಿಯಲ್ಲಿ ಬರುವ ಜಾಗದಲ್ಲಿ ಎಲ್ಲಾ ಸಮುದಾಯದ ಜನರಿಗೆ ಸ್ಮಶಾನ ಭೂಮಿಯನ್ನು ಮಾಡಬೇಕು ಎಂದು ಅಧಿಕಾರಿಗಳಿಗೆ ಶಾಸಕ ಉಮೇಶ ಕತ್ತಿ ಸೂಚಿಸಿದರು. ಹಿಡಕಲ್ ಡ್ಯಾಮಿನ ಬಸ್ ನಿಲ್ದಾಣವನ್ನು 15 ಲಕ್ಷ ರೂ. ವೆಚ್ಚದಲ್ಲಿ ಸುಧಾರಣೆ ಮಾಡಲು ಚರ್ಚಿಸಲಾಯಿತು. ರೈತರ ಜಮೀನುಗಳಿಗೆ ಹೋಗಲು ಮತ್ತು ಕಬ್ಬು ಸಾಗಾಣಿಕೆ ಮಾಡಲು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೊಗ ಖಾತರಿ ಯೋಜನೆಯಲ್ಲಿ ರಸ್ತೆ ಸುಧಾರಣೆ ಕಾಮಗಾರಿಯನ್ನು ಆರಂಭಿಸಲು ಗ್ರಾ.ಪಂ. ಆಡಳಿತ ವರ್ಗದವರಿಗೆ ಶಾಸಕರು ಸೂಚಿಸಿದರು. ಕುಡಿಯುವ ನೀರು ಇನ್ನೀತರ ವಿಷಯಗಳ ಕುರಿತು ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಹುಕ್ಕೇರಿ ತಹಶೀಲ್ದಾರ ಅಶೋಕ ಗುರಾಣಿ, ಸಿಡಿಪಿಓ ಮಂಜುನಾಥ ಪರಸನ್ನವರ, ಹೊಸಪೇಟ ಗ್ರಾ.ಪಂ. ಆಡಳಿತಾಧಿಕಾರಿ ಅರವಿಂದ ಜಮಖಂಡಿ, ಪ್ರಭಾರ ಪಿಡಿಓ ಎಂ.ಬಿ.ಪೂಜೇರಿ, ಸ.ಕಾ.ನಿ. ಅಭಿಯಂತ ರವಿ ತಾಳೂರ, ಪ್ರಥಮದರ್ಜೆ ಗುತ್ತಿಗೆದಾರ ಕೆ. ದೊರೆಸ್ವಾಮಿ. ವ್ಹಿ.ಕೆ. ಹುದ್ದಾರ, ಎಲ್.ಎಸ್. ತಳವಾರ, ಎ.ಎಮ್. ಇನಾಮದಾರ, ಸಲೀಂ ಮುಲ್ಲಾ, ಸದಾನಂದ ಮಾಳ್ಯಾಗೋಳ, ಸುವರ್ಣಾ ಮಗದುಮ್ಮ, ಸಿದ್ದಪ್ಪ ಹೊಸಮನಿ, ಸುಮಿತ್ರಾ ಬಾಗೇವಾಡಿ, ಬಸವರಾಜ ಯಕ್ಕುಂಡಿ, ಶಮಾ ಮುಲ್ತಾನಿ, ಸದಾನಂದ ಹಂಚಿನಾಳ, ಡಾ. ಎಮ್.ಬಿ. ಕಮತೆ, ಬಂಡೆಪ್ಪ ಮಾದರ, ಮತ್ತು ಅಧಿಕಾರಿಗಳು ಗಣ್ಯರು ಗ್ರಾ.ಪಂ. ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.