ಬ್ಯಾಡಗಿ: ಪಟ್ಟಣದ ಹೂಗಾರ ಗಲ್ಲಿಯಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮುಖಾಂತರ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಮಾರಿಕಾಂಬ ದೇವಸ್ಥಾನ ಎದುರು ಬಳಿಕ ರಾಮಾಯಣದ ತತ್ವ ಹಾಗೂ ವಾಲ್ಮೀಕಿ ಋಷಿಯ ಜೀವನ ಚರಿತ್ರೆ ಕುರಿತು ರೂಪಕಗಳ ಪ್ರದರ್ಶನ ಮಾಡಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷೆ ಲಲಿತಾ ಗಾಜೇರ, ಲಕ್ಷ್ಮಿ ಬಿ,ಎಸ್ ಹಾಗೂ ವಾಲ್ಮೀಕಿ ಸಮಾಜ ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳ ಮಹಿಳಾ ಸದಸ್ಯರು ಉಪಸ್ಥಿತರಿದ್ದರು.