ಯುಎಸ್ಎ : ಇಡೀ ವಿಶ್ವದ ಗಮನ ಸೆಳೆದಿರುವ ಅಮೆರಿಕದ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದೆ. ಶ್ವೇತಭವನಕ್ಕೆ ಯಾರು ಅಧಿಪತಿ ಆಗುತ್ತಾರೆ ಎಂಬುದನ್ನು ಅಮೆರಿಕದ ಜನರು ವೋಟ್ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸಿದ್ದಾರೆ. ಕಿಲ್ಲರ್ ಕೊರೊನಾದ ನಡುವೆಯೂ ಅಮೆರಿಕ ಚುನಾವಣೆ ಇಡೀ ವಿಶ್ವಕ್ಕೆ ಭಾರಿ ಕುತೂಹಲ ಮೂಡಿಸಿದೆ.

ಅಧ್ಯಕ್ಷರ ಚುನಾವಣೆಯು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನವೆಂಬರ್ನಲ್ಲಿ ಮೊದಲ ಸೋಮವಾರದ ನಂತರ ನಡೆಯುತ್ತದೆ.

ಸಾಮಾನ್ಯ ಚುನಾವಣೆಗಳಲ್ಲಿ ಜನರು ತಮ್ಮ ಮತಗಳಿಂದ ಸೂಕ್ತ ಅಭ್ಯರ್ಥಿಗಳನ್ನು ನೇರವಾಗಿ ಆಯ್ಕೆ ಮಾಡಲಾಗುತ್ತದೆ. ಆದರೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ನೇರವಾಗಿ ನಾಗರಿಕರು ಆಯ್ಕೆ ಮಾಡುವುದಿಲ್ಲ. ಬದಲಾಗಿ "electors" ಚುನಾವಣಾ ಕಾಲೇಜು ಎಂಬ ಪ್ರಕ್ರಿಯೆಯ ಮೂಲಕ ಆಯ್ಕೆ ಮಾಡಲಾಗುತ್ತೆ. Electors ಬಳಸುವ ಪ್ರಕ್ರಿಯೆಯು ಸಂವಿಧಾನದಿಂದ ಬಂದಿದೆ.


ಈ ಅರ್ಹತೆಗಳನ್ನು ಹೊಂದಿದ ವ್ಯಕ್ತಿಯು ಅಧ್ಯಕ್ಷ ಸ್ಥಾನಕ್ಕೆ ತಮ್ಮ ಉಮೇದುವಾರಿಕೆಯನ್ನು ಘೋಷಿಸಬಹುದು. ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಯು $ 5,000 ಕ್ಕಿಂತ ಹೆಚ್ಚು ಹಣವನ್ನು ಖರ್ಚು ಮಾಡಿದರೆ ಅವರು ಫೆಡರಲ್ ಚುನಾವಣಾ ಆಯೋಗದಲ್ಲಿ ನೋಂದಾಯಿಸಿಕೊಳ್ಳಬೇಕು.

ಪ್ರಚಾರದ ಹಣವನ್ನು ಸಂಗ್ರಹಿಸಲು ಮತ್ತು ಖರ್ಚು ಮಾಡಲು ಪ್ರಧಾನ ಪ್ರಚಾರ ಸಮಿತಿಯನ್ನು ಹೆಸರಿಸುವುದು. ಹೊಸ ನಾಯಕನನ್ನು ಆಯ್ಕೆ ಮಾಡುವ ಮೂಲಕ ಜಾಗತಿಕ ರಾಜಕೀಯಲ್ಲಿ ಬದಲಾವಣೆಯ ಮುನ್ನುಡಿ ಬರೆಯಲು ಅಮೆರಿಕ ಜನರು ಸಜ್ಜಾಗಿದ್ದಾರಾ ನೋಡಬೇಕು.