ವಾಷಿಂಗ್ಟನ್: ವಿಶ್ವದ ದೊಡ್ಡಣ್ಣ ಅಮೆರಿಕಾ ಅಧ್ಯಕ್ಷೀಯ ಮತ್ತು ಉಪಾಧ್ಯಕ್ಷೀಯ ಸ್ಥಾನದ ಚುನಾವಣಾ ತೀವ್ರ ಕುತೂಹಲ ಮೂಡಿಸಿದೆ ಇನ್ನೇನು ಫಲಿತಾಂಶ ಹೊರಬೀಳತ್ತಿದ್ದು, ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡೆನ್ 209 ಮತ ಭಾರಿ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಹಾಲಿ ಅಧ್ಯಕ್ಷರಾಗಿರುವ ರಿಪಬ್ಲಿಕ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ 112 ಮತ ಪಡೆಯುವ ಮೂಲಕ ಹಿನ್ನಡೆಯಲ್ಲಿದ್ದಾರೆ. ಅಮೆರಿಕದ ಇತಿಹಾಸದಲ್ಲಿಯೇ ಇದು ಅತ್ಯಂತ ಬಿಗುವಿನ ಚುನಾವಣೆ ಎನಿಸಿಕೊಂಡಿದೆ. ಈ ಬಾರಿ ಇಲ್ಲಿ ಯಾರೇ ಗೆದ್ದರೂ ಇತಿಹಾಸ ನಿರ್ಮಾಣವಾಗುವುದು ಶತಸಿದ್ಧ .