ಸಂಗಮ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ

  • 14 Jan 2024 , 10:28 PM
  • Belagavi
  • 89

ಹುಕ್ಕೇರಿ: ಶಾಸರಾದ ಉಮೇಶ ಕತ್ತಿ ಮತ್ತು ಬೆಳಗಾವಿ ಬಿ.ಡಿ.ಸಿ.ಸಿ ಬ್ಯಾಂಕಿನ್ ಅಧ್ಯಕ್ಷ ರಮೇಶ ಕತ್ತಿ ಅವರ ಮಾರ್ಗದರ್ಶನದಲ್ಲಿ ಬುಧವಾರ ದಿ. 4 ರಂದು ತಾಲೂಕಿನ ಹಿಡಕಲ್ ಡ್ಯಾಮಿನ ಸಂಗಮ ಸಕ್ಕರೆ ಕಾರ್ಖಾನೆಗೆ ಚುನಾವಣೆ ನಡೆಯಿತು. ಅಧ್ಯಕ್ಷರಾಗಿ ರಾಜೇಂದ್ರ ಮಲಗೌಡಾ ಪಾಟೀಲ ಮತ್ತು ಉಪಾಧ್ಯಕ್ಷರಾಗಿ ಶಂಕರರಾವ ಗೋವಿಂದರಾವ ಬಾಂದುರ್ಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ನಿರ್ದೇಶಕರಾಗಿ ಶಶಿಕಾಂತ ಅಕ್ಕಪ್ಪ ನಾಯಿಕ, ಬಸಗೌಡಾ ಬಾಳಗೌಡಾ ಪಾಟೀಲ, ಗುರು ಮಲಗೌಡಾ ಪಾಟೀಲ, ಅಣ್ಣಾಸಾಹೇಬ ಬಾಬುರಾವ ಪರ್ವತರಾವ, ಅರ್ಜುನ ಪಾಟೀಲ, ಅಮರನಾಥ ಕಲ್ಲಪ್ಪ ಮಹಾಜನಶೆಟ್ಟಿ, ರವೀಂದ್ರ ಶಿವಗೌಡಾ ಪಾಟೀಲ, ಸುಭಾಷ ಮಲಗೌಡಾ ಪಾಟೀಲ, ಶ್ರೀಮಂತ ಗಂಗಪ್ಪ ಸನ್ನಾಯಿಕ, ಶಿವಪ್ಪ ಕಲ್ಲಪ್ಪ ಗಸ್ತಿ, ಸಂಗೀತಾ ಬಸಲಿಂಗ ಕರಗುಪ್ಪಿ, ರಾಜಶ್ರೀ ಮುರುಘೇಂದ್ರ ಕವಟಗಿಮಠ ಇವರು ಇತ್ತೀಚಿಗೆ ನಡೆದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಅವಿರೋಧ ಆಯ್ಕೆಯಾಗಿದ್ದಾರೆ. ಚುನಾವಣಾ ಅಧಿಕಾರಿಯಾಗಿ ಬೆಳಗಾವಿ ಉಪವಿಭಾಗ ಅಧಿಕಾರಿ ಅಶೋಕ ತೇಲಿ ಕಾರ್ಯನಿರ್ವಹಿಸಿದರು. ಈ ಸಂದರ್ಭದಲ್ಲಿ ಹುಕ್ಕೇರಿ ತಹಶೀಲ್ದಾರ ಅಶೋಕ ಗುರಾಣಿ, ಯಮಕನಮರಡಿ ಕಂದಾಯ ನಿರೀಕ್ಷಕ ಸಿ.ಕೆ.ಕಲಕಾಮಕರ, ಹುಕ್ಕೇರಿ ಗ್ರಾಮೀಣ ವಿದ್ಯುತ ಸಹಕಾರಿ ಸಂಘದ ಅಧ್ಯಕ್ಷ ಕಲಗೌಡಾ ಪಾಟೀಲ, ಸಂಕೇಶ್ವರ ಹೀರಾಸುಗರ ನಿರ್ದೇಶಕ ಉದಯ ದೇಸಾಯಿ ಮತ್ತು ಇತರರು ಉಪಸ್ಥಿತರಿದ್ದರು.

Read All News