ಧಾರವಾಡದಿಂದ ಹಿಂಡಲಗಾ ಜೈಲಿಗೆ ಶಿಫ್ಟ್ ಆದ ವಿನಯ ಕುಲಕರ್ಣಿ

  • 14 Jan 2024 , 11:11 PM
  • Belagavi
  • 100

ಬೆಳಗಾವಿ: ಯೋಗೀಶಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ನ್ಯಾಯಾಂಗ ಬಂಧನ ನೀಡಿ ಎಂದು ಧಾರವಾಡ 3 ನೆ ಹೆಚ್ಚುವರಿ ಸೆಷನ್ಸ್ ಕೋರ್ಟ್ ಆದೇಶ ಹೊರಡಿಸಿದ ಹಿನ್ನೆಲೆ ಇಂದು ಗುರುವಾರ ಸಂಜೆ 8.15ಕ್ಕೆ ಬೆಳಗಾವಿ ಇಂಡಲಗಾ ಕಾರಾಗೃಹಕ್ಕೆ ರವಾನೆ ಮಾಡಲಾಗಿದೆ. ಯೋಗೀಶಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ನ.6 ರವರೆಗೆ ನ್ಯಾಯಾಂಗ ಬಂಧನ ನೀಡಿ ಧಾರವಾಡ 3 ನೆ ಹೆಚ್ಚುವರಿ ಸೆಷನ್ಸ್ ಕೋರ್ಟ್ ಆದೇಶ ಹೊರಡಿಸಿದೆ.

ಗುರುವಾರ ಬೆಳಗ್ಗೆ 7 ಗಂಟೆಗೆ ಧಾರವಾಡದ ಉಪನಗರ ಠಾಣೆಗೆ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ವಿಚಾರಣೆಗಾಗಿ ಕರೆಯಿಸಿಕೊಂಡಿದ್ದ ಸಿಬಿಐ ಅಧಿಕಾರಿಗಳು ನಂತರ ಸುದೀರ್ಘ 9 ಗಂಟೆಗಳ ಕಾಲ ವಿಚಾರಣೆ ನಡೆಸಿ ಬಳಿಕ ಬಂಧಿಸಿದ್ದರು. ಧಾರವಾಡದ ನ್ಯಾಯಾಧೀಶ ಎಚ್.ಪಂಚಾಕ್ಷರಿ ಅವರ ಮುಂದೆ ವಿನಯ್ ಕುಲಕರ್ಣಿ ಅವರನ್ನು ಸಂಜೆ ಹಾಜರುಪಡಿಸಿದ ಸಿಬಿಐ ಅಧಿಕಾರಿಗಳು ವಿಚಾರಣೆಗಾಗಿ ಮೂರು ದಿನಗಳ ಕಾಲ ತಮ್ಮ ವಶಕ್ಕೆ ನೀಡಬೇಕೆಂದು ಮನವಿ ಮಾಡಿದರು. ನ್ಯಾಯಪೀಠವು ಒಂದು ದಿನದ ಮಟ್ಟಿಗೆ ವಿನಯ್ ಕುಲಕರ್ಣಿ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದ ಹಿನ್ನಲೆಯಲ್ಲಿ ಇಂದು ಸಿಬಿಐ ಅಧಿಕಾರಿಗಳು ಬೆಳಗಾವಿ ಇಂಡಲಗಾ ಕಾರಾಗೃಹದ ವಿಚಾರಣಾಧಿನ ಕೈದಿ ಸಂಖ್ಯೆ ಕೊಠಡಿಗೆ ಅವರನ್ನು ರವಾನಿಸಿದ್ದಾರೆ.

Read All News