ಸದ್ಯಕ್ಕೆ ಓಪನ್ ಆಗುವುದಿಲ್ಲ ಕೆಲ ಪ್ರಮುಖ ದೇವಸ್ಥಾನಗಳು

  • 15 Jan 2024 , 3:51 AM
  • Bengaluru
  • 183
ಬೆಂಗಳೂರು: ಸದ್ಯ ದೇಶ ಅನ್‌ಲಾಕ್‌ ಹಿನ್ನೆಲೆಯಲ್ಲಿ, ಸ್ಥಗಿತಗೊಂಡಿದ್ದ ಎಲ್ಲಾ ಚಟುವಟಿಕೆಗಳನ್ನು ಪುನರಾರಂಭಿಸಲಾಗುತ್ತಿದೆ. ರಾಜ್ಯಾದ್ಯಂತ ನಾಳೆ ದೇವಸ್ಥಾನಗಳು ಪ್ರಾರಂಭ ಆಗುತ್ತಿವೆ ಆದರೆ ರಾಜ್ಯದ ಪ್ರಮುಖ ಕೆಲವು ದೇವಾಲಯಗಳು ಪ್ರಾರಂಭವಾಗುತ್ತಿಲ್ಲ. ಶೃಂಗೇರಿ ಶಾರದಾಂಬೆ ಹಾಗೂ ಮೂಡಿಗೆರೆಯ ಹೊರನಾಡು ಅನ್ನಪೂರ್ಣೇಶ್ವರಿ, ಸವದತ್ತಿಯ ಯಲ್ಲಮ್ಮ ದೇವಸ್ಥಾನ, ಚಿಂಚಲಿ ಮಾಯಮ್ಮ ಸೇರಿದಂತೆ ಕೆಲ ಮಂದಿರಗಳು ತೆರೆಯುತ್ತಿಲ್ಲ. ಭಕ್ತರ ಹಿತದೃಷ್ಟಿ ಹಾಗೂ ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಜೂನ್ 8 ರ ನಂತರ ಈ ದೇವಾಲಯಗಳನ್ನು ತೆರೆಯುವುದಿಲ್ಲ, ರಾಜ್ಯದ ಈ ಪ್ರಮುಖ ದೇವಸ್ಥಾನಗಳಗೆ ಕೇರಳ, ತಮಿಳುನಾಡು, ಮಹಾರಾಷ್ಟ್ರ, ಆಂಧ್ರ ಪ್ರದೇಶ ಸೇರಿದಂತೆ ಭಕ್ತರು ಹೆಚ್ಚಾಗಿ ಬರುವ ಸಂಭವವಿದ್ದು ಅಲ್ಲಿ ಕೋರೊನಾ ಸೋಂಕಿತರ ಸಂಖ್ಯೆ ಹೆಚ್ಚಿರುವ ಕಾರಣದಿಂದ ಸದ್ಯಕ್ಕೆ ದೇವಸ್ಥಾನ ತೆರೆಯದಿರುವ ನಿರ್ಧಾರ ಮಾಡಲಾಗಿದೆ.

Read All News