ಬೆಳಗಾವಿ: ಡಿಸಿಸಿ ಬ್ಯಾಂಕ್ ಚುನಾವಣಾ ಇತಿಹಾಸದಲ್ಲಿಯೇ ಈ ಸಲಾ ಜಿದ್ದಾ ಜಿದ್ದಿನ ಅಖಾಡ ಸಿದ್ಧವಾಗಿದ್ದು ಇಂದು ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಡಿಸಿಸಿ ಬ್ಯಾಂಕಿನ ಮೂರು ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆಯಲಿದ್ದು. ಖಾನಾಪುರ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ತೀವ್ರ ಫೈಟ್ ಏರ್ಪಟ್ಟಿದೆ. 16 ನಿರ್ದೇಶಕ ಸ್ಥಾನದಲ್ಲಿ 13 ಅವಿರೋಧ ಆಯ್ಕೆ ನಡೆದಿವೆ.

ಇನ್ನುಳಿದ 3 ಸ್ಥಾನಗಳಿಗೆ ಇಂದು ಚುನಾವಣೆ ನಡೆಯಲಿದೆ ಖಾನಾಪುರ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳಕರ ಮತ್ತು ಮಾಜಿ ಎಂಇಎಸ ಶಾಸಕ ಅರವಿಂದ ಪಾಟೀಲ ಮಧ್ಯೆ ಫೈಟ್ ನಡೆದಿದ್ದು. ಬಿಜೆಪಿ ನಾಯಕರಾದ ಸವದಿ, ಕತ್ತಿ ಬ್ರದರ್ಸ್, ಜಾರಕಿಹೊಳಿ ಬ್ರದರ್ಸ್ ಗೆ ಅಂಜಲಿ ನಿಂಬಾಳಕರ ಸೆಡ್ಡು ಹೊಡೆದಿದ್ದು ಇಂದು ಜಿದ್ದಾಜಿದ್ದಿನ ಕಣ ಎದುರಾಗಲಿದೆ. ಬಿಜೆಪಿ ಘಟಾನುಘಟಿ ನಾಯಕರು ಅರವಿಂದ ಪಾಟೀಲಗೆ ಬೆಂಬಲ ಸೂಚಿಸಿದ್ದಾರೆ.