ಸಮಾಜಪರ ಕಾರ್ಯದೊಂದಿಗೆ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿದ ಯುವಾ ಬ್ರಿಗೇಡ್ ಟೀಮ್

  • 17 Dec 2023 , 8:52 PM
  • Belagavi
  • 121
"ಯುವಾಬ್ರಿಗೇಡ್" ನಿಮಗೊಂದುಸಲಾಂ

ಬೆಳಗಾವಿ: ಇಂದಿನ ದಿನಗಳಲ್ಲಿ ಕಾರ್ಯಗಿಂತ ಹೆಚ್ಚು ಪ್ರಚಾರ ಗಿಟ್ಟಿಸಿಕೊಳ್ಳುವ ಸಂಘಟನೆಗೆ ಏನು ಕಡಿಮೆ ಇಲ್ಲ. ಅಂತದ್ರಲ್ಲಿ ಇಲ್ಲೊಂದು ಸಂಘಟನೆ ಯಾವುದೇ ಪ್ರಚಾರದ ಅಪೇಕ್ಷೆ ಪಡೆದೆ ಯುವಕರನ್ನು ಜಾಗೃತ ಮಾಡುತ್ತಾ ಸಮಾಜಮುಖಿ

logintomyvoice

ಕಾರ್ಯಗಳಲ್ಲಿ ತೊಡಗಿಸಿಕೊಂಡು ದೇಶದ ಒಳಿತಿಗಾಗಿ ಯುವಶಕ್ತಿಯನ್ನು ಕಟ್ಟಿಕೊಂಡು ಎಲ್ಲ ಕಾರ್ಯಕ್ಕೂ ಸಿದ್ಧವಾಗಿ ನಿಂತಿದೆ "ಯುವಾ ಬ್ರಿಗೇಡ್" ಟೀಮ್ ಇಂತಹ ಸಂಘಟನೆಯ ಕಾರ್ಯವನ್ನು ಗುರುತಿಸಿ ಕರ್ನಾಟಕ ಸರ್ಕಾರವು ರಾಜ್ಯೋತ್ಸವ ಪ್ರಶಸ್ತಿಯನ್ನು ನ.7 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸರಳ ಸಮಾರಂಭದೊಂದಿಗೆ ಪ್ರಶಸ್ತಿ ಪ್ರದಾನ ಮಾಡಿದರು.

logintomyvoice

ಇಂತಹ ಸುಸಂದರ್ಭದಲ್ಲಿಯೂ ಕೂಡ ಇದೆ ಯುವಾ ಬ್ರಿಗೇಡ್ ಕಾರ್ಯಕರ್ತರು ರಾಜ್ಯೋತ್ಸವ ಪ್ರಶಸ್ತಿ ಸ್ವೀಕಾರ ಮಾಡುವ ಹೊತ್ತಲ್ಲಿ ಯುವಾ ಬ್ರಿಗೇಡ್ ಬೆಳಗಾವಿ ಜಿಲ್ಲೆಯ ಕಾರ್ಯಕರ್ತರಿಂದ 'ನಡೆ ಮುಂದೆ ಹಿಗ್ಗಿ ನಡೆಮುಂದೆ' ಎಂಬ ಕಾರ್ಯಕ್ರಮ ಹಮ್ಮಿಕೊಂಡು ನವೆಂಬರ್ 7 ಮತ್ತು 8 ರಂದು ಜಿಲ್ಲೆಯ 11 ಬಸ್ ನಿಲ್ದಾಣಗಳನ್ನು ಸ್ವಚ್ಚಗೊಳಿಸಿ ಸುಣ್ಣ-ಬಣ್ಣ ಬಳಿದು ಸುಂದರ ರೂಪ ಕೊಡುವುದರೊಂದಿಗೆ ಸಂಭ್ರಮಾಚರಣೆ ಮಾಡಿದರು.

logintomyvoice

ಇಂತಹ ಸಮಾಜಮುಖಿ ಕಾರ್ಯವನ್ನು ಮಾಡುತ್ತಾ ಯುವಶಕ್ತಿಯನ್ನು ಜಾಗೃತಗೊಳಿಸುತ್ತಿರುವ "ಯುವಾಬ್ರಿಗೇಡ್" ಟೀಮ್ ಗೆ ನಮ್ಮೆಲ್ಲರ ಕಡೆಯಿಂದ ಒಂದು ಸಲಾಂ ಹೇಳಲೇಬೇಕು.

Read All News