ಜನ್ಮ ದಿನಕ್ಕೂ, ದೀಪಾವಳಿಗೂ ಡೋಂಟ್ ಕೇರ್; ಮತ್ತೆ14 ದಿನ ಹಿಂಡಲಗಾ ಜೈಲಿಗೆ ವಿನಯ್ ಕುಲಕರ್ಣಿ

  • 15 Jan 2024 , 1:29 AM
  • Belagavi
  • 236

ಬೆಳಗಾವಿ: ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿಯವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಧಾರವಾಡ ಸೆಷನ್ಸ್ ನ್ಯಾಯಾಲಯ ಆದೇಶ ನೀಡಿದ ಬೆನ್ನಲ್ಲೇ ಅವರನ್ನು ಇಂದು ಸೋಮವಾರ ಸಂಜೆ

3.56ಕ್ಕೆ ಮತ್ತೆ ಬೆಳಗಾವಿ ಹಿಂಡಲಗಾ ಕಾರಾಗ್ರಹಕ್ಕೆ ಶಿಪ್ಟ್ ಮಾಡಲಾಯಿತು. ಕಳೆದ ಮೂರು ದಿನಗಳಿಂದ ಸಿಬಿಐ ಕಸ್ಟಡಿಗೆ ತೆಗೆದುಕೊಂಡಿತ್ತು, ಕಸ್ಟಡಿ ಅಂತ್ಯವಾದ ಹಿನ್ನೆಲೆ ಇಂದು ವಿನಯ್ ಕುಲಕರ್ಣಿ ಅವರನ್ನು ಇಂದು ವಿಡಿಯೋ ಕಾನ್ಸರೆನ್ಸ್ ಮೂಲಕ ಧಾರವಾಡದ 3 ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು,

ಈ ವೇಳೆ ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ ನ .23 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದ್ದರಿಂದ ಹುಬ್ಬಳ್ಳಿಯಿಂದ ಹಿಂಡಲಗಾ ಜೈಲಿಗೆ ಸಿಬಿಐ ಅಧಿಕಾರಿಗಳು ಕರೆತಂದು ಇಲ್ಲಿಯ ಸಿಬ್ಬಂದಿಗೆ ಒಪ್ಪಿಸಿದರು. ಜೈಲು ಪ್ರವೇಶಿಸುವ ಮುನ್ನ ಅಣ್ಣಾ ಅಂತಾ ಕರೆದ ಬೆಂಬಲಿಗರಿಗೆ ವಿನಯ ಕುಲಕರ್ಣಿ ಕೈ ಮಾಡಿದರು.

ಇವರನ್ನು ಕ್ವಾರಂಟೈನ್ ಸೆಲ್ ಗೆ ಶಿಫ್ಟ ಮಾಡಲಾಯಿತು.ಈಗಾಗಲೇ ಅವರು ಜನ್ಮದಿನವನ್ನು ಹಿಂಡಲಗಾ ಜೈಲಿನಲ್ಲಿಯೇ ಕಳೆದಿದ್ದಾರೆ. ಇನ್ನೂ ದೀಪಾವಳಿಯನ್ನು ಕೂಡ ಇದೆ ಜೈಲಿನಲ್ಲಿ ಕಳೆಯುವಂತಾಗಿದೆ.

Read All News