ರಸ್ತೆ ಮರುದಾಂಬರೀಕರಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಎಲ್. ನಾಗೇಂದ್ರ

  • 15 Jan 2024 , 2:49 AM
  • Mysuru
  • 186

ಮೈಸೂರು: ಲೋಕೋಪಯೋಗಿ ಇಲಾಖೆಯ ಅನುದಾನದಲ್ಲಿ ಚಾಮರಾಜ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಸರಸ್ವತಿಪುರಂ ಹುಡ್ಕೋ ಬಡಾವಣೆ ಬಿಸಿಲು ಮಾರಮ್ಮನ ದೇವಸ್ಥಾನದ ರಸ್ತೆ ಹಾಗೂ ಪಂಪಾಪತಿ ರಸ್ತೆ ಮರುದಾಂಬರೀಕರಣಕ್ಕಾಗಿ ಸುಮಾರು 1.00 ಕೋಟಿ ರೂ. ವೆಚ್ಚದ ಕಾಮಗಾರಿಗೆ ಸೋಮವಾರ ದಿ.9 ರಂದು ಸಹಕಾರ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಮತ್ತು ಆ ಕ್ಷೇತ್ರದ ಶಾಸಕ ಎಲ್. ನಾಗೇಂದ್ರ ಅವರು ಜೊತೆಗೂಡಿ ಗುದ್ದಲಿ ಪೂಜೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ರಾಜೀವ್, ಮೈಸೂರು ಮಹಾನಗರ ಪಾಲಿಕೆ ಸದಸ್ಯೆ ವಾರ್ಡ್ ಸಂ-21 ರ ವೇದಾವತಿ, ಬಸವೇಗೌಡ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಹರ್ಷ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ರಾಜು, ಗುತ್ತಿಗೆದಾರ ಗೋವಿಂದೇಗೌಡ ಅಂಡ್ ಸನ್ಸ್, ನಗರ ಭಾ.ಜ.ಪ ಅಧ್ಯಕ್ಷ ಶ್ರೀವತ್ಸ, ಚಾಮರಾಜ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಸೋಮಶೇಖರ ರಾಜು, ಉಪಾಧ್ಯಕ್ಷ ಕುಮಾರ್ ಗೌಡ, ಪ್ರಧಾನ ಕಾರ್ಯದರ್ಶಿ ರಮೇಶ್ & ಪುನೀತ್ ಗೌಡ, ಮುಖಂಡರುಗಳಾದ ಶಿವಶಂಕರ್, ದಿನೇಶ್ ಗೌಡ, ಶ್ರೀನಿವಾಸ್, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪ್ರಜ್ವಲಶ್ರೀವತ್ಸ, ರೈತ ಮೋರ್ಚಾ ಅಧ್ಯಕ್ಷ ದೇವರಾಜ್, ಸೋಮಶೇಖರ್ ರಾಜ್ ಅರಸ್, ಶಿವಲಿಂಗೇಗೌಡ,ನವೀನ್, ಗುರುದತ್, ಸುಬ್ರಮಣ್ಯ, ಹಾಗೂ ಇತರರು ಉಪಸ್ಥಿತರಿದ್ದರು.

Read All News