ರಸ್ತೆ ಬದಿಯ ಜಂಗಲ್ ಕಡಿದು ಸೂಚನಾ ಫಲಕ ಅಳವಡಿಸಿ; ಸಾರ್ವಜನಿಕರಿಂದ ಆಗ್ರಹ

  • 15 Jan 2024 , 1:25 AM
  • Haveri
  • 99

ಬ್ಯಾಡಗಿ: ಪಟ್ಟಣದ ಛತ್ರ ರಸ್ತೆಯ ಬದಿಯ ಗಿಡ ಮರಗಳನ್ನು ಕಡಿದು, ಅಲ್ಲಿ ರಸ್ತೆ ಸೂಚನಾ ಫಲಕ ಅಳವಡಿಸುವಂತೆ ಆಗ್ರಹಿಸಿ ನೇಹರು ನಗರದ ನಿವಾಸಿಗಳು ಹಾಗೂ ಸಾರ್ವಜನಿಕರು ಲೋಕೋಪಯೋಗಿ ಇಲಾಖೆಯ ಇಂಜಿನೀಯರ ರಾಜೇಂದ್ರ ದೊಡ್ಮನಿ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರಭದಲ್ಲಿ ಅಲ್ಲಿಯ ನಿವಾಸಿ ವೀರಭದ್ರಗೌಡ್ರ ಹೊಮ್ಮರಡಿ ಮಾತನಾಡಿ, ಛತ್ರ ರಸ್ತೆ ಮೂಲಕ ನಿತ್ಯವೂ ಬೆಳಗ್ಗೆ ಹಾಗೂ ಸಂಜೆ ಹೊತ್ತಲ್ಲಿ ವಯೋವೃದ್ದರು, ಮಹಿಳೆಯರು ವಾಯುವಿವಾರಕ್ಕೆ ತೆರಳುತ್ತಾರೆ. ನೂರಾರು ಬೃಹತ್ ವಾಹನಗಳು ಓಡಾಡುತ್ತಿವೆ. ಹೆಚ್ಚು ಬಾರ ಹೊತ್ತು ಟಿಪ್ಪರಗಳು ವೇಗವಾಗಿ ಚಲಿಸುತ್ತಿವೆ. ರಸ್ತೆ ಸಾಕಷ್ಟು ತಿರುವಿನಿಂದ ಕೂಡಿದ್ದು, ರಸ್ತೆಗೆ ಹೊಂದಿಕೊಂಡು ಮುಳ್ಳಿನ ಗಿಡಗಳು ಬೆಳೆದುನಿಂತಿವೆ. ಬೈಕ್ ಹಾಗೂ ದ್ವಿಚಕ್ರವಾಹನಗಳು ವೇಗದಲ್ಲಿ ರಸ್ತೆ ಕಾಣುವುದಿಲ್ಲ. ಅನಿವಾರ್ಯವಾಗಿ ಚಾಲಕರು, ಪಾದಚಾರಿಗಳು ಆತಂಕಪಡಬೇಕಿದೆ.

logintomyvoice

ಅಲ್ಲಲ್ಲಿ ವೇಗನಿಯಂತ್ರಗಳನ್ನು ಅಳವಡಿಸುವುದು, ಸಿಗ್ನಲ್‍ಗಳನ್ನು ತೋರಿಸುವ ಸೂಚನಾ ಫಲಕಗಳನ್ನು ಹಾಕುವಂತೆ ಸಾಕಷ್ಟು ಬಾರಿ ಲೋಕೋಪಯೋಗಿ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಕೂಡಲೇ ಸಾರ್ವಜನಿಕರಿಗೆ ಅನುಕೂಲ ಮಾಡದಿದ್ದಲ್ಲಿ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ಗಜೇಂದ್ರಗಡ ಹಾಗೂ ಸೊರಬ ಮುಖ್ಯರಸ್ತೆಯಲ್ಲಿ ಬೃಹತ್ ಪ್ರಮಾಣದಲ್ಲಿ ಗುಂಡಿಗಳು ಬಿದ್ದಿದ್ದರೂ ಅಧಿಕಾರಿಗಳು ಕಂಡೂ ಕಾಣದಂತೆ ಓಡಾಡುತ್ತಿದ್ದಾರೆ. ಕೊಟ್ಯಾಂತರ ರೂ.ವೆಚ್ಚದಲ್ಲಿ ಮುಖ್ಯರಸ್ತೆ ನಿರ್ಮಿಸಿದ್ದರೂ ಎಲ್ಲೆಡೆ ಕಳಪೆಯಾಗಿದೆ. ಕೂಡಲೇ ರಸ್ತೆ ಗುಂಡಿಗಳನ್ನು ಮುಚ್ಚುವ ಮೂಲಕ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿ ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಸಿ.ಎಸ್.ಬಣಕಾರ, ಬಸವರಾಜ ಬನ್ನಿಹಟ್ಟಿ, ರವೀಂದ್ರ ಬೇತೂರುಮಠ, ಸುರೇಶ ಅರಳಿ, ರೋಹಿತ ರಾಯ್ಕರ ಎಸ್.ಎಂ.ಮೆಣಸಿನಹಾಳ, ಸುಧೀರ ಹವಳದ ಹಾಗೂ ಇತರರು ಉಪಸ್ಥಿತರಿದ್ದರು.

Read All News