ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಗ್ರಾಮೀಣ ಪ್ರತಿಭೆಗೆ, ಮಂಜುನಾಥ ಪಾಟೀಲರಿಂದ ಸತ್ಕಾರ

  • 15 Jan 2024 , 1:13 AM
  • Belagavi
  • 106

ಹುಕ್ಕೇರಿ: ಗ್ರಾಮೀಣ ಭಾಗದಲ್ಲಿ ಹುದಗಿರುವ ಪ್ರತಿಭೆಗಳು ರಾಷ್ಟ್ರಮಟ್ಟದಲ್ಲಿ ಗ್ರಾಮದ ಕೀರ್ತಿಯನ್ನು ಬೆಳಗಿಸುತ್ತಿರುವ ಸಾಧಕರನ್ನು ಸನ್ಮಾನಿಸುವ ಕಾರ್ಯ ಶ್ಲಾಘನೀಯವಾದದ್ದು, ಎಂದು ಪಾಶ್ಚಾಪೂರ ಜಿಂ.ಪ ಸದಸ್ಯ ಮಂಜುನಾಥ ಪಾಟೀಲ ಹೇಳಿದರು. ತಾಲೂಕಿನ ಕರಗುಪ್ಪಿ ಗ್ರಾಮದ ಯುವಕ ಮಹಾಂತೇಶ ನಾಗಪ್ಪ ಯಮಕನಮರಡಿ ಭಾರತ ದೇಶ ಏಕೈಕ ಅಗ್ರೀ ಕೌನ್ಸಿಲ್ ರಿಸರ್ಚ ಪರೀಕ್ಷೆಯಲ್ಲಿ ಓ ಬಿ ಸಿ ಪ್ರಥಮ ಸ್ಥಾನ ಪಡೆದಿದ್ದಕ್ಕೆ ಗ್ರಾಮದ ವತಿಯಿಂದ ಇವರಿಗೆ ದಿ.9 ರಂದು ಸತ್ಕಾರ ಸತ್ಕರಿಸಿದರು. ಈ ಪರೀಕ್ಷೆಯಲ್ಲಿ ವಿಶೀಷ್ಟ ಸಾಧನೆ ಮಾಡಿ ಪಾಶ್ಚಾಪೂರ ಜಿ.ಪಂ ವ್ಯಾಪ್ತಿಯಲ್ಲಿ ಬರುವ ಕರಗುಪ್ಪಿ ಗ್ರಾಮದ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಮಿಂಚಿಸಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆಮಾಡಿರುವ ಸಾಧಕರನ್ನು ಗುರ್ತಿಸಿ ಸನ್ಮಾನಿಸುವ ಕಾರ್ಯವನ್ನು ಮುಂಬರುವ ದಿನಗಳಲ್ಲಿ ಮಾಡಲಾಗುವುದು ಎಂದು ಜಿ.ಪಂ ಸದಸ್ಯ ಹೇಳಿದರು. ಈ ಸಂದರ್ಭದಲ್ಲಿ ಸಿದ್ದಗೌಡ ಬಿ ಪಾಟೀಲ, ಆನಂದ ಚೌಗಲಾ, ನಾಗಪ್ಪಾ ಯಮಕನಮರಡಿ, ಮಲ್ಲಿಕಾರ್ಜುನ ಲಕಾಜನವರ, ಪಶುವೈದ್ಯಾಧಿಕಾರಿ ಬಸವರಾಜ ಹುಕ್ಕೇರಿ, ರಾಮಚಂದ್ರ ಯಮಕನಮರಡಿ, ಬಾಬು ಪಾಟೀಲ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Read All News