ವಾಷಿಂಗ್ಟನ್: ಇತಿಚಿಗಷ್ಟೇ ನಡೆದ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಡೆಮಾಕ್ರಟಿಕ್ ಪಾರ್ಟಿ ಅಭ್ಯರ್ಥಿ ಜೋ ಬಿಡೆನ್ ಕೋವಿಡ್-19 ಸಲಹಾ ಸಮಿತಿಯನ್ನು ರಚನೆ ಮಾಡಿದ್ದಾರೆ. ಈ ಸಲಹಾ ಸಮಿತಿ ರಚನೆಗೆ ಸಹ ಅಧ್ಯಕ್ಷರಾಗಿ ಡಾ.ವಿವೇಕ್ ಎಚ್.ಮೂರ್ತಿ ಅವರನ್ನು ನೇಮಕ ಮಾಡಿದ್ದಾರೆ. ಡಾ.ವಿವೇಕ್ ಎಚ್.ಮೂರ್ತಿ ಅವರು ಕರ್ನಾಟಕದ ಮಂಡ್ಯ ಮೂಲದವರಾಗಿದ್ದಾರೆ. ಈ ಹಿಂದೆ ಬರಾಕ್ ಒಬಾಮ ಅಧ್ಯಕ್ಷರಾಗಿದ್ದಾಗ 2014ರಲ್ಲಿ ಅಮೆರಿಕದ 'ಸರ್ಜನ್ ಜನರಲ್' ಆಗಿ ನೇಮಕ ಮಾಡಿದ್ದರು. ಈ ಬಾರಿ ಬಿಡೆನ್ ಚುನಾವಣಾ ತಂಡದಲ್ಲಿದ್ದ ವಿವೇಕ ಅವರು ಪ್ರಮುಖ ಪಾತ್ರ ವಹಿಸಿದ್ದರು.