ಬೆಳಗಾವಿ: ಕಳೆದ ಒಂದು ತಿಂಗಳಿಂದ ನಡೆದ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಗದ್ದುಗೆ ಏರಲು ಸಾಕಷ್ಟು ಕಸರತ್ತಿನ ನಡುವೆ ಇಂದು ಹನ್ನೊಂದು ಗಂಟೆಗೆ ಅದಕ್ಕೆ ತೆರೆ ತೆರೆಬೀಳಲಿದೆ. ಈಗಾಗಲೇ ನಿನ್ನೆ ತಡ ರಾತ್ರಿವರೆಗೂ ನಗರದ ಸರ್ಕ್ಯೂಟ್ ಹೌಸನಲ್ಲಿ ಬಿಜೆಪಿ ನಾಯಕರುಗಳಾದ ಡಿಸಿಎಂ ಲಕ್ಷ್ಮಣ ಸವದಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ, ಶಾಸಕ ಉಮೇಶ್ ಕತ್ತಿ, ಆನಂದ ಮಾಮನಿ, ಸಂಸದ ಅಣ್ಣಾಸಾಬ್ ಜೊಲ್ಲೆ ಸೇರಿ ಒಂದು ಸುತ್ತಿನ ಸಭೆ ನಡೆಸಿದರು ಆಯ್ಕೆ ವಿಚಾರ ಇನ್ನೂ ಕಗ್ಗಂಟಾಗಿ ಉಳಿದದೆ. ಡಿಸಿಎಂ ಲಕ್ಷ್ಮಣ ಸವದಿ, ಉಮೇಶ ಕತ್ತಿ, ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ಇಂದು ಮತ್ತೆ ಬೆಳಗಾವಿ ಸರ್ಕ್ಯೂಟ್ ಹೌಸನಲ್ಲಿ ಮತ್ತೊಂದು ಸುತ್ತಿನ ಸಭೆ ಸೇರಿ 11 ಗಂಟೆ ಅಧ್ಯಕ್ಷ, ಉಪಾಧ್ಯಕ್ಷ ಅಭ್ಯರ್ಥಿ ಹೆಸರು ಘೋಷಣೆ ಮಾಡುವ ಸಾಧ್ಯತೆ ಇದೆ. ಅಧ್ಯಕ್ಷ ಸ್ಥಾನಕ್ಕೆ ರಮೇಶ ಕತ್ತಿ, ಮಹಾಂತೇಶ ದೊಡ್ಡಗೌಡರ ಪೈಪೋಟಿ ನಡೆದಿದ್ದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನದ ಗದ್ದುಗೆ ಯಾರ ಪಾಲಾಗಲಿದೆ ಕಾದು ನೋಡಬೇಕು.