ಮತ್ತೆ ಬಿಡಿಸಿಸಿ ಬ್ಯಾಂಕಲ್ಲಿ ರಮೇಶ ಕತ್ತಿ ದರ್ಬಾರ್...

  • 14 Jan 2024 , 11:05 PM
  • Belagavi
  • 182

ಬೆಳಗಾವಿ: ಬಿಡಿಸಿಸಿ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಮಾಜಿ ಸಂಸದ ರಮೇಶ ಕತ್ತಿ ಹಾಗೂ ಉಪಾಧ್ಯಕ್ಷರಾಗಿ ಮಹಾಂತೇಶ ದೊಡ್ಡಗೌಡರ ಹಾಗೂ ಸುಭಾಸ ಢವಳೇಶ್ವರ ಸರ್ವಾನೂ ಮತದಿಂದ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ ಎಂದು ಡಿಸಿಎಂ ಲಕ್ಷಣ ಸವದಿ ಘೋಷಣೆ ಮಾಡಿದರು.

logintomyvoice

ಶನಿವಾರ ಪ್ರವಾಸಿ ಮಂದಿರದಲ್ಲಿ ಒಂದು ಗಂಟೆಗಳ ಕಾಲ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಎಲ್ಲ ಡಿಸಿಸಿ ಬ್ಯಾಂಕ್ ನಿರ್ದೇಶಕರ ಒಮ್ಮತದ ನಿರ್ಣಯ ಮೇರೆಗೆ ಬಿಡಿಸಿಸಿ ಬ್ಯಾಂಕ್ ಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದರು. ಬಿಡಿಸಿಸಿ ಬ್ಯಾಂಕ್ ಬಗ್ಗೆ ಸಾಕಷ್ಟು ಸುದ್ದಿಯಾಗಿತ್ತು. ಡಿಸಿಸಿ ಬ್ಯಾಂಕ್ ‌ಶತಮಾನೋತ್ಸವ ಇರುವುದರಿಂದ ಬ್ಯಾಂಕ್ ಚುನಾವಣೆಯಾಗ ಬಾರದು.

ಎಲ್ಲ‌‌ ಅವಿರೋಧ ಆಯ್ಕೆಯಾಗಬೇಕೆಂದು ಸೂಚನೆ‌ ನೀಡಿದರು. ಅದರಂತೆ 14 ನಿರ್ದೇಶಕರನ್ನು ಮುಂದುವರೆಸಬೇಕೆಂದು ಹೇಳಿದ್ದರು. ಮೂರು ಕ್ಷೇತ್ರಕ್ಕೆ ಚುನಾವಣೆಯಾಗಿತ್ತು. ಚುನಾವಣೆಯಾದರೂ 14 ನಿರ್ದೇಶಕರ ಆಯ್ಕೆ ಮಾಡಿದ್ದೇವು ಎಂದರು. ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಮಾತನಾಡಿ, ಅಧ್ಯಕ್ಷ,‌ಉಪಾಧ್ಯಕ್ಷರ ಆಯ್ಕೆ ಅವಿರೋಧವಾಗಿದೆ. ಮುಂದಿನ ದಿನಮಾನದಲ್ಲಿ ರಮೇಶ ಜಾರಕಿಹೊಳಿ, ಲಕ್ಷಣ ‌ಸವದಿ‌, ಉಮೇಶ ಕತ್ತಿ ಅವರ ನೇತೃತ್ವದ ಪಕ್ಷ‌ ನಡೆಸಿಕೊಂಡು ಹೋಗಲಾಗುವುದು.

logintomyvoice

ಮುಂದಿನ ದಿನಮಾನಗಳಲ್ಲಿ ಬಿಡಿಸಿಸಿ ಬ್ಯಾಂಕ್ ನಿಂದ ರೈತರಿಗೆ ಸಹಾಯವಾಗುವ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ ಎಂದು ಸ್ಪಷ್ಟಪಡಿಸಿದರು. ಈ ಸಂದರ್ಭದಲ್ಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ, ಆನಂದ ಮಾಮನಿ, ಶಾಸಕ ಉಮೇಶ ಕತ್ತಿ, ಮಹಾಂತೇಶ ದೊಡ್ಡಗೌಡರ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಜಾರಕಿಹೊಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Read All News