ಚ.ಕಿತ್ತೂರು: ತಾಲೂಕಿನ ಮರಡಿ ನಾಗಲಾಪುರ ಗ್ರಾಮದಲ್ಲಿ ಮಕ್ಕಳ ದಿನಾಚರಣೆ ಹಾಗೂ ದೀಪಾವಳಿ ಹಬ್ಬದ ಆಚರಣೆ ನಿಮಿತ್ತ ಮಕ್ಕಳ ಮನರಂಜನಾ ಸ್ಪರ್ದೆ ಹಾಗೂ ಸ್ಮರಣ ಶಕ್ತಿ ಪರೀಕ್ಷೆ ಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಸುಮಿತ್ರಾ ಹಂಚಿನಮನಿ ಕೋರೋನಾ ಮಹಾಮಾರಿಯಿಂದ ಈ ಶೈಕ್ಷಣಿಕ ವರ್ಷ ಮಕ್ಕಳ ಕಲಿಕಾ ಚಟುವಟಿಕೆ ಮೇಲೆ ಪರಿಣಾಮ ಬೀರಿದೆ ಇಂತಹ ಮಕ್ಕಳಿಗೆ ಈ ರೀತಿಯ ಸ್ಪರ್ಧಾ ಕಾರ್ಯಕ್ರಮಗಳಿಂದ ಮಕ್ಕಳ ಸಮಗ್ರ ಬೆಳವಣಿಗೆಗೆ ಸ್ಫೂರ್ತಿದಾಯಕ ವಾಗುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೌಡಪ್ಪ ಪಾಟೀಲ ವಹಿಸಿಕೊಂಡಿದ್ದರು. ಗ್ರಾಮದ ಹಿರಿಯರಾದ ಭೀರಪ್ಪ ದೇಶನೂರ, ಬಾಬು ಚಂದರಗಿ, ಉದ್ದಪ್ಪ ಗೊಡಚಿ, ಸಿದ್ದವ್ವ ಗೊಡಚಿ, ಕಾವೇರಿ ಚಂದರಗಿ, ರೂಪಾ ಕಬ್ಬೂರ, ಅನಿತಾ ಕೋಲಕಾರ ಸೇರಿದಂತೆ ಗ್ರಾಮಸ್ಥರು, ವಿದ್ಯಾರ್ಥಿಗಳು ಸೇರಿದಂತೆ ಇತರರು ಪಾಲ್ಗೊಂಡಿದ್ದರು.