ಹುಕ್ಕೇರಿ: ಸಾಲದ ಹೊರೆಯಿಂದ ನೆಕಾರನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ಹತ್ತರಗಿ ಸಮೀಪದ ದಾದಾಬಾನಟ್ಟಿ ಗ್ರಾಮದಲ್ಲಿ ನಡೆದಿದೆ. ಸಂಜೀವ ರಾಮಾಪ್ಪಾ ಮಜತಿ (36) ಎಂಬಾತ ನೇಕಾರನಾಗಿದ್ದು ಕೋವಿಡ್-19 ಪ್ರಾರಂಭನಿಂದ ಇಂದಿನವರಗೆ ತನ್ನ ಯಾವುದೇ ನೇಕಾರಿಕೆಯಲ್ಲಿ ನೈದ ಸೀರೆಗಳ ಮಾರಾಟವಾಗದೆ ಹಾಗೂ ಖಾಸಗಿ ಸೊಸೈಟಿಯಲ್ಲಿ 60 ಸಾವಿರ ರೂ. ಸಾಲ ಪಡೆದಿದ್ದ ಹಣವನ್ನು ಮರುಪಾವತಿ ಮಾಡಲಾಗದ ಹಿನ್ನಲೆ ಮನನೊಂದು ರವಿವಾರ ತನ್ನ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ. ಮೃತನು ಪತ್ನಿ, ಒಂದು ಗಂಡು, ಒಂದು ಹೆಣ್ಣು ಮಗುವನ್ನು ಬಿಟ್ಟು ಅಗಲಿದ್ದಾನೆ. ಈ ಪ್ರಕರಣ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.