ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ನ್ಯೂಜಿಲೆಂಡ್‌ನ ಸಂಸದ, ಡಾ.ಗೌರವ್ ಶರ್ಮಾ

  • 17 Dec 2023 , 11:20 PM
  • world
  • 98

ನ್ಯೂಜಿಲೆಂಡ್‌: ಮೂಲತಃ ಹಿಮಾಚಲ ಪ್ರದೇಶದ ಹಮೀರ್‌ಪುರದವರಾದ ಡಾ.ಗೌರವ್ ಶರ್ಮಾ (33) ಇತ್ತೀಚೆಗೆ ನ್ಯೂಜಿಲೆಂಡ್‌ನ ಹ್ಯಾಮಿಲ್ಟನ್ ವೆಸ್ಟ್ ಫಾರ್ ಲೇಬರ್ ಪಾರ್ಟಿಯಿಂದ ಸಂಸತ್ ಸದಸ್ಯರಾಗಿ ಆಯ್ಕೆಯಾದರು.

logintomyvoice

"ನ್ಯೂಜಿಲೆಂಡ್‌ನ ಸ್ಥಳೀಯ ಮಾವೋರಿ ಭಾಷೆಯಲ್ಲಿ ಶರ್ಮಾ ಮೊದಲು ಪ್ರಮಾಣವಚನ ಸ್ವೀಕರಿಸಿದ, ನಂತರ ಭಾರತದ ಶಾಸ್ತ್ರೀಯ ಭಾಷೆ - ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಆಕ್ಲೆಂಡ್‌ನಿಂದ ಎಂಬಿಬಿಎಸ್ ಮತ್ತು ವಾಷಿಂಗ್ಟನ್‌ನಿಂದ ಎಂಬಿಎ ಮಾಡಿದ ಡಾ.ಶರ್ಮಾ, ಹ್ಯಾಮಿಲ್ಟನ್‌ನ ನಾವ್ಟನ್‌ನಲ್ಲಿ ಜನರಲ್ ಪ್ರಾಕ್ಟೀಷನರ್ (ಜಿಪಿ) ಆಗಿ ಕೆಲಸ ಮಾಡುತ್ತಿದ್ದಾರೆ.

ಈ ಹಿಂದೆ ಅವರು ನ್ಯೂಜಿಲೆಂಡ್, ಸ್ಪೇನ್, ಯುಎಸ್, ನೇಪಾಳ, ವಿಯೆಟ್ನಾಂ, ಮಂಗೋಲಿಯಾ, ಸ್ವಿಟ್ಜರ್ಲೆಂಡ್ ಮತ್ತು ಭಾರತದಲ್ಲಿ ಸಾರ್ವಜನಿಕ ಆರೋಗ್ಯ, ನೀತಿ, ಔಷದ ಮತ್ತು ಸಮಾಲೋಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

Read All News