ಬೆಳಗಾವಿ: ರಾಜ್ಯದಲ್ಲಿ ಪೊಲೀಸರಿಗೆ ಎನ್ ಡಿ ಎ ಮಾದರಿಯಲ್ಲಿ ತರಬೇತಿ ನೀಡಬೇಕೆಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು. ಇಂದು ನಡೆದ ನಗರದ ಕಂಗ್ರಾಳಿ ಮೈದಾನದ ಕೆ ಎಸ್ ಆರ್ ಪಿ 6ನೇ ತಂಡದ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ಗೃಹ ಸಚಿವರು ಭಾಗಿಯಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ಪೊಲೀಸರಿಗೆ ಎನ್ ಡಿ ಎ ಮಾದರಿಯಲ್ಲಿ ತರಬೇತಿ ಶಾಲೆಯನ್ನು ಆರಂಭ ಮಾಡಬೇಕು ಅದಕ್ಕೆ ಯೋಗ್ಯವಾದ ಉತ್ತಮವಾದ ಸ್ಥಳವೆಂದರೆ ಅದು ಬೆಳಗಾವಿ ಆಗಿದೆ. ರಾಜ್ಯದಲ್ಲಿ ಕಾಲಕಾಲಕ್ಕೆ ಶಸ್ತ್ರಾಸ್ತ್ರ ಬದಲಾವಣೆ ಆಗಿದೆ.

ಸೈನ್ಯದ ಉನ್ನತ ಮಟ್ಟದ ತರಬೇತಿ ನೀಡಬೇಕು ಎನ್ನುವುದು ನಮ್ಮ ಉದ್ದೇಶವಾಗಿದ್ದು ಅದಕ್ಕಾಗಿ ಇಂದು ಸಭೆಯೊಂದನ್ನು ಸ್ಥಳೀಯ ಮಟ್ಟದ ಅಧಿಕಾರ ಜತೆಗೆ ಮಾಡುತ್ತೇನೆ ನಂತರ ಮುಖ್ಯಮಂತ್ರಿಗಳ ಮೂಲಕ ಕೇಂದ್ರ ರಕ್ಷಣಾ ಸಚಿವ ಸಹಾಯ ಪಡೆದು ತರಬೇತಿ ಶಾಲೆ ಆರಂಭದ ಬಗ್ಗೆ ಚರ್ಚಿಸುತ್ತೇನೆ. ಒಂದು ವರ್ಷದಲ್ಲಿ ತರಭೇತಿ ಶಾಲೆ ಆರಂಭವಾಗುತ್ತದೆ. ಇಡೀ ರಾಜ್ಯದಲ್ಲಿ ಒಂದೇ ತರಬೇತಿ ಶಾಲೆ ಇದಾಗಲಿದೆ.
ಹಾಗೂ ಸುಮಾರು17 ಕೋಟಿ ರೂಪಾಯಿ ವೆಚ್ಚದಲ್ಲಿ ಬೆಳಗಾವಿ ನಗರ ಪೊಲೀಸರ ಆಯುಕ್ತ ಕಚೇರಿ ನಿರ್ಮಾಣ ಕಾರ್ಯ ಕೂಡ ನಡೆಯಲಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ 187 ಪ್ರಶಿಕ್ಷಣಾರ್ಥಿಗಳು, ಎಡಿಜಿಪಿ ಅಲೋಕ ಕುಮಾರ್, ಹಾಗೂ ಬೆಳಗಾವಿ ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್ ಕೂಡ ಪಥ ಸಂಚಲನದಲ್ಲಿ ಭಾಗಿಯಾಗಿದ್ದರು.