ಬ್ಯಾಡಗಿ: ಯಾವುದೆ ಹಣಕಾಸು ಸಂಸ್ಥೆಯ ಅಭಿವೃದ್ದಿಯಲ್ಲಿ ಸಾಲಗಾರರ ಮರುಪಾವತಿ ಪ್ರಮುಖ ಪಾತ್ರ ವಹಿಸಲಿದೆ. ಸಾಲ ಪಡೆದವರು ಸಕಾಲದಲ್ಲಿ ಕಂತು ತುಂಬಿದಲ್ಲಿ ಸಂಸ್ಥೆಗಳು ಲಾಭಾಂಶ ಕಾಣಲು ಸಾಧ್ಯವೆಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು. ಪಟ್ಟಣದ ಬಸ್ಸ ನಿಲ್ದಾಣದ ಬಳಿ ನೂತನವಾಗಿ ಆರಂಭವಾದ ವೀರಶೈವ ಲಿಂಗಾಯತ ಪಂಚಮಸಾಲಿ ಪತ್ತಿನ ಸೌಹಾರ್ಧ ನಿಯಮಿತ ಬ್ಯಾಂಕ ಉದ್ಘಾಟಿಸಿ ಮಾತನಾಡಿದ ಅವರು, ಬ್ಯಾಡಗಿ ರಾಷ್ಟ್ರಮಟ್ಟದಲ್ಲಿ ಮೆಣಸಿನಕಾಯಿ ವ್ಯಾಪಾರಕ್ಕೆ ಖ್ಯಾತಿ ಪಡೆದಿದೆ. ಇಲ್ಲಿ ಸಾವಿರಾರು ಕೊ.ರೂ. ವಹಿವಾಟು ನಡೆಸುವ ಮೂಲಕ ಸಾಕಷ್ಟು ವ್ಯವಹಾರ ನಡೆಯುತ್ತಿದೆ. ಹೀಗಾಗಿ ಇಲ್ಲಿ ಬಹುತೇಕ ಬ್ಯಾಂಕುಗಳ ಅಗತ್ಯವಿದ್ದು, ಎಲ್ಲ ಬ್ಯಾಂಕಗಳು ಆರ್ಥಿಕ ಸೌಲಭ್ಯಗಳನ್ನು ನೀಡುತ್ತಿವೆ. ಹಣಕಾಸು, ಸಂಘ, ಸಂಸ್ಥೆಗಳ ಅಭಿವೃದ್ದಿಗೆ ಸಾಲಗಾರರ ಮರುಪಾವತಿ ಮುಖ್ಯವಾಗಿವೆ ಎಂದರು. ವೀರಶೈವ ಲಿಂಗಾಯತ ಪಂಚಮಸಾಲಿ ಪತ್ತಿನ ಸೌಹಾರ್ಧ ನಿಯಮಿತ ನೂತನ ಅಧ್ಯಕ್ಷ ಜಯಣ್ಣ ಶಿರೂರ ಮಾತನಾಡಿ, ಪಟ್ಟಣದ ಸಣ್ಣಪುಟ್ಟ ಉದ್ಯೊಗಿಗಳ ಅನುಕೂಲ ಹಾಗೂ ಸಮಾಜ ಬಾಂಧವರಿಗೆ ಸಹಕಾರ ನೀಡಲು ಸಂಸ್ಥೆ ಯತ್ನಿಸುತ್ತಿದೆ.
ಸಂಸ್ಥೆಯ ಏಳ್ಗೆಯಲ್ಲಿ ಗ್ರಾಹಕರ ಸಹಕಾರ ಹೆಚ್ಚಿದ್ದು, ಸಾಲ ಪಡೆಯುವ ವ್ಯಕ್ತಿಯ ಜೊತೆಗೆ ಸಾಲದ ಜಾಮೀನುದಾರ ಹಣ ಮರಳಿಸುವಲ್ಲಿ ಅಷ್ಟೆ ಜವಾಬ್ದಾರನಾಗಿದ್ದಾನೆ ಎಂದರು. ಈ ವೇಳೆ ಎಪಿಎಂಸಿ ಅಧ್ಯಕ್ಷ ವೀರಭದ್ರಪ್ಪಗೊಡಚಿ, ವೀರಶೈವ ಪಂಚಮಸಾಲಿ ಸಮಾಜದರಾಜ್ಯ ಸಂಘಟನಾ ಕಾರ್ಯದರ್ಶಿ ಸಿ.ಆರ್.ಬಳ್ಳಾರಿ, ಸಮಾಜದ ಜಿಲ್ಲಾಧ್ಯಕ್ಷ ಎಸ್.ಆರ್.ಅಂಗಡಿ, ಸಹಕಾರಿ ಸಂಘಗಳ ಉಪ ನಿಭಂಧಕನಾಗರಾಜಕುಮ್ಮೂರ, ಸಂಸ್ಥೆಯ ನಿರ್ಧೆಶಕರಾದ ಶಂಭಣ್ಣ ದಾನಪ್ಪನವರ, ಶಿವಪ್ಪ ಹರಮಗಟ್ಟಿ, ತಿರಕಪ್ಪ ಮರಬಸಣ್ಣನವರ, ಹನುಮಂತಪ್ಪ ಕುರುಡಣ್ಣನವರ, ಶೋಭಾ ಹೊಸಮನಿ, ಶಾಂತವ್ವ ಬೂದಿಹಾಳ, ಶಿವಯೋಗಿ ಗಡಾದ ಚನ್ನವೀರಪ್ಪ ಬಳ್ಳಾರಿ, ಬಸವರಾಜ ಕಡೇಕೊಪ್ಪ, ಉಮೇಶ ಚೌಧರಿ ಹಾಗೂ ಇತರರಿದ್ದರು.