ಮಕ್ಕಳ ಕೈಗೆ ಮೊಬೈಲ್ ಕೊಡದಿರಿ, ಟಿವಿ ಹಚ್ಚದಿರಿ

  • Shivaraj
  • 23 Dec 2025 , 12:05 AM
  • Bailhongal
  • 95

ಬೈಲಹೊಂಗಲ- ಮಕ್ಕಳ ಆರೋಗ್ಯ, ವಿದ್ಯಾಭ್ಯಾಸವನ್ನು ಗಮನದಲ್ಲಿಟ್ಟುಕೊಂಡು ಮುಂದೆ ಸಾಗಿರುವ ಹಲಗಾ ಗ್ರಾಮ ಪ್ರತಿಸಿನ ಸಂಜೆ 7 ರಿಂದ ರಾತ್ರಿ 9 ರ ವರಗೆ ಮೊಬೈಲ್ ಹಾಗೂ ಟಿವಿ ಬಂದ ಮಾಡುವ ನಿರ್ಧಾರಕ್ಕೆ ಬಂದಿದೆ. 

ಪ್ರತಿಯೊಂದು ಗ್ರಾಮಕ್ಕೆ ಆದರ್ಶ ಪ್ರಾಯವಾಗಿರುವ ಈ ಗ್ರಾಮ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಒಂದು ಹೆಜ್ಜೆ ಮುಂದೆ ಇಟ್ಟಿದೆ. 

ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಒಂದು ಗ್ರಾಮ ಈ ಯೋಜನೆಯನ್ನು ಜಾರಿಗೆ ಗೊಳಿಸಿದ್ದು, ಇದು ಇಂದು ಹೆಚ್ಚಿನ‌ಮಹತ್ವ ಪಡೆಯುತ್ತಿದೆ. ಮನೆಯಲ್ಲಿ ಮೊಬೈಲ್ ಬಳಕೆದಾರರು, ಟಿವಿ ವೀಕ್ಷಿಸುವ ಜನರು ಹೆಚ್ಚಾದಂತೆ ಶಾಲಾ, ಕಾಲೇಜು ವಿದ್ಯಾರ್ಥಿಗಳ ಮೇಲೆ ಬೀರುವ ವ್ಯತಿರಿಕ್ತ ಪರಿಣಾಮವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟ ಮಹಾರಾಷ್ಟ್ರ ರಾಜ್ಯದ ಜಿಲ್ಲಾಧಿಕಾಯೊಬ್ಬರು ಜಾರಿಗೆ ತಂದ ಈ ಯೋಜನೆ ಎಷ್ಟೋ ಪರಿಣಾಮಕಾರಿಯಾಗಿ ಬೀರಿದೆ. 

ಇದರಿಂದ ಪ್ರಭಾವಿತರಾದ ಹಲಗಾ ಗ್ರಾಮದ ಗ್ರಾಮಸ್ಥರು ಈ ನೀತಿಯನ್ನು ತಮ್ಮಲ್ಲಿ ಅಳವಡಿಸಿಕೊಂಡು ರಾಜ್ಯಕ್ಕೆ ಮಾದರಿಯಾಗಿದ್ದಾರೆ. 

ಈ ಗ್ರಾಮದಲ್ಲಿ ಸಂಜೆ 7 ಗಂಟೆ ಆದರೆ ಸಾಕು ಗ್ರಾಮ ಪಂಚಾಯತಿ ಕಡೆಯಿಂದ ಶಬ್ದ (ಸೈರನ್) ಕೇಳಿ ಬರುತ್ತದೆ ತಕ್ಷಣ ಮನೆಯ ಮಂದಿಯಲ್ಲ ತಮ್ಮ ಮೊಬೈಲ್ ಫೋನ್ ಬಂದ ಮಾಡಿ ಟಿವಿಯನ್ನು ಕೂಡಾ ಆಫ್ ಮಾಡುತ್ತಾರೆ. ಅನಿವಾರ್ಯ ಪರಿಸ್ಥಿತಿ ಎದುರಾದರೆ ಮಾತ್ರ ಮೊಬೈಲ್ ಬಳಕೆ ಮಾಡುತ್ತಾರೆ. ಇದೆಇಂದ ತಮ್ಮ ಮಕ್ಕಳ ಕಲಿಕೆಗೆ ಕೂಡಾ ಸಹಕಾರಿಯಾಗಲಿದೆ ಎನ್ನುವದು ಮಾತ್ರ ಇಲ್ಲಿನ ಜನರ ಆಶಯ. 

ಸಂಜೆ ಆದರೆ ಸಾಕು ತಮ್ಮ ಮಕ್ಕಳ ಜೊತೆಗೆ ಟಿವಿಯಲ್ಲಿ ಬರುವ ಧಾರಾವಾಹಿಗಳನ್ನು ನೋಡುತ್ತಾ ಕುಳಿತುಕೊಳ್ಳುವ ಜನರು ಈ ಬಗ್ಗೆ ಸ್ವಲ್ಪ ಗಮನ ಹರಿಸಬೇಕಿದೆ. 

ಮಗು ಅಳುತ್ತಿದ್ದರೆ ಅದರ ಕೈಯಲ್ಲಿ ಮೊಬೈಲ್ ಕೊಟ್ಟು ಕುಡ್ರಿಸುವ ಜನರ ಮದ್ಯೆ ಇಂತಹ ಒಂದು ಹೊಸದಾದ ಯೋಜನೆ ಜಾರಿಗೆ ತಂದು ಮಾದೆಇಯಾದ ಹಲಗಾ ಗ್ರಾಮಸ್ಥರ ಕಾರ್ಯ ಶ್ಲಾಘನೀಯ.

ವರದಿಗಾರ : ರವಿಕಿರಣ್ ಯಾತಗೇರಿ 

Read All News