ಬೆಳಗಾವಿ : ನಗರದ ತಿಲಕವಾಡಿ ಪೊಲೀಸ್ ಠಾಣೆಯಲ್ಲಿ ಮೋಟಾರ್ ಬೈಕ್ ಕಳ್ಳತನ ಪ್ರಕರಣದಲ್ಲಿ ಆರೋಪಿತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಳಗಾವಿ ನಗರದ ವಿವಿಧ ಠಾಣೆಗಳಲ್ಲಿ ದಾಖಲಾದ ಮೋಟಾರ್ ಬೈಕ್ ಕಳ್ಳತನ ಪ್ರಕರಣಗಳಿಗೆ ಸಂಬಂದಿಸಿದಂತೆ ಪೊಲೀಸ್ ಆಯುಕ್ತ ಯಡಾ ಮಾರ್ಬನ್ಯಾoಗ್,ಉಪ-ಪೊಲೀಸ್ ಆಯುಕ್ತೆ (ಅ&ಸಂ) ಸ್ನೇಹ ಪಿ.ವಿ, ಮತ್ತು ಸಹಾಯಕ ಪೊಲೀಸ್ ಆಯುಕ್ತ ಹೆಚ್. ಶೇಖರಪ್ಪ ಅವರ ಮಾರ್ಗದರ್ಶನದಲ್ಲಿ ತಿಲಕವಾಡಿ ಪೊಲೀಸ್ ಠಾಣೆಯ ಇನ್ಸಪೆಕ್ಟರ ರವರ ನೇತೃತ್ವದ ಅಧಿಕಾರಿ ಮತ್ತು ಸಿಬ್ಬಂದಿ ಜನರ ತಂಡ ಇಂದು ಆರೋಪಿಗಳಾದ ಹೈದರ್ ಅಲಿ ಮುಸ್ಲಿಂ ಅಲಿ ಶೇಖ್ ವೀರಭದ್ರನಗರ್ ಬೆಳಗಾವಿ ಅಮನ ನಗರದ ನದೀಮ್ ಶಮ್ಸುದ್ದಿನ್ ಟೋಪಿಗಾರ್ ಇವರನ್ನು ತಿಲಕವಾಡಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 72/2024 ಕಲಂ 379, 411IPCನೇದ್ದರ ಅಡಿಯಲ್ಲಿ ದಸ್ತಗಿರಿ ಮಾಡಿ ಇವರಿಂದ ತಿಲಕವಾಡಿ ಮತ್ತು ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಸುಮಾರು 09 ಮೋಟಾರ್ ಬೈಕ್ ಗಳನ್ನು ಮತ್ತು ಕೃತ್ಯಕ್ಕೆ ಬಳಸಿದ ಒಂದು ಮೋಟಾರ್ ಬೈಕ್ ಜಪ್ತಿ ಮಾಡಿದ್ದು ಒಟ್ಟು 7,00,000 ಮೊತ್ತದ 10 ಮೋಟಾರ್ ಬೈಕ್ ಗಳನ್ನು ಜಪ್ತ ಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ.
ತಿಲಕವಾಡಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ ಪರಶುರಾಮ್ ಪೂಜೇರಿ, ಪಿ.ಎಸ್.ಐ ಸಂತೋಷ್ ದಳವಾಯಿ, ಸಿಎಚ್ಸಿ ಗಳಾದ ಮಹೇಶ್ ಪಾಟೀಲ್, ಸೋಮಲಿಂಗ ಕರ್ಲಿಂಗನವರ್, ಸಿಪಿಸಿಗಳಾದ ಸಂಜು ಸಂಗೋಟಿ ಮಲ್ಲಿಕಾರ್ಜುನ್ ಪಾತ್ರೋಟ್ , ಲಾಡ್ಜಿಸಾಬ್ ಮುಲ್ತಾನಿ, ತಾಂತ್ರಿಕ ವಿಭಾಗದ ಸಿಬ್ಬಂದಿ ರಮೇಶ್ ಅಕ್ಕಿ, ಕಾರ್ಯವೈಖರಿಯನ್ನು ಮಾನ್ಯ ಪೊಲೀಸ್ ಆಯುಕ್ತರು ಬೆಳಗಾವಿ ನಗರ ರವರು ಶ್ಲಾಘಿಸಿ ಬಹುಮಾನ ಘೋಷಿಸಿದ್ದಾರೆ.