ಬೈಲಹೊಂಗಲ : ಬಡವನ ಆಸರೆಯಾಗಬೇಕಾದ ಸರ್ಕಾರ ದಿನಂಪ್ರತಿ ಪ್ರತಿಯೊಂದು ವಸ್ತುವಿನ ಬೆಲೆ ಏರಿಕೆಯ ಸಾಧನೆ ಮಾಡಿ ಅವನ ಬಾಳಿಗೆ ಮುಳ್ಳಾಗಿ ಪರಿಣಮಿಸುತ್ತಿದೆ.
ಯಾವುದರ ಬೆಲೆ ಏರಿಕೆ ಮಾಡಿದರೆ ಸರ್ಕಾರಕ್ಕೆ ಹೆಚ್ಚಿನ ಹಣಕಾಸಿನ ನೆರವು ಸಿಗಬಹುದು ಎಂಬ ಯೋಚನೆಯಲ್ಲಿ ನಿರತರಾಗಿರುವ ರಾಜ್ಯ ಸರ್ಕಾರ ಪೆಟ್ರೋಲ್, ಡಿಸೇಲ್ ಬೆಲೆ ಏರಿಸಿ ವಾಹನ ಸವಾರರಿಗೆ ಬಿಸಿ ಮುಟ್ಡಿಸಿದೆ ಈಗ ಮತ್ತೊಂದು ಶಾಕ್ ಕೊಡಲು ಮುಂದಾಗಿದೆ ಸರ್ಕಾರ.
ವಾಹನ ಚಲಾವಣೆಗೆ ಬಹುಮುಖ್ಯವಾದದ್ದು ಪ್ರಮಾಣ ಪತ್ರಗಳು ಅದರಲ್ಲಿ ಎಮಿಷನ್ ಸರ್ಟಿಫಿಕೇಟ್ ಕೂಡಾ ಒಂದು. ಈಗ ಈ ಸರ್ಕಾರ ಅದರ ಬೆಲೆಯನ್ನು ಸಹ ಏರಿಕೆ ಮಾಡೂವ ಚಿಂತನೆ ನಡೆಸಿದ್ದು ಬಹು ಬೇಗನೆ ವಾಹನ ಸವಾರರ ಜೇಬಿಗೆ ಕತ್ತರಿ ಬೀಳೂವದಂತೂ ಸತ್ಯ.
ಯಾವದ ನೋಡತೇರಿ ಅದರ ರೇಟ್ ಜಾಸ್ತಿ. ಯಾವದ ಕೇಳತೇರಿ ಅದರ ರೇಟ್ ಜಾಸ್ತಿ. ಸರ್ಕಾರ ಬಂದ ಒಂದ ವರ್ಷದಾಗ ಏನೆಲ್ಲಾ ಬೆಲೆ ಏರಿಕೆ ಮಾಡಬಹುದು ಅದನ್ನೆಲ್ಲ ಮಾಡಿ ರಾಜ್ಯದ ಜನತೆಗೆ ತೋರಿಸಿದೆ. ವಸ್ತುವಿನ ಬೆಲೆ ಏರಿಕೆ ಮಾಡಿದಂತೆ ದಿನಗೂಲಿ, ನೌಕರರ ತಿಂಗಳ ಸಂಬಳ ಏರಿಕೆ ಮಾಡಲಿ ನೋಡೋನ ಎಂಬುವದು ಬೆಲೆ ಏರಿಕೆಯ ಬಿಸಿ ತಟ್ಟಿದ ರಾಜ್ಯದ ಮತದಾರನ ಅಭಿಮತವಾಗಿದೆ.
ವರದಿ : ರವಿಕಿರಣ್ ಯಾತಗೇರಿ