ಧ್ವಜಾರೋಹಣ ಕಂಬ ಹತ್ತುವಾಗ ಕೆಳಕ್ಕೆ ಬಿದ್ದು ಬಾಲಕನ ಸಾವು

  • shivaraj B
  • 15 Aug 2024 , 12:41 PM
  • Koppal
  • 1139

ಕುಷ್ಟಗಿ(ಕೊಪ್ಪಳ ಜಿಲ್ಲೆ) : ತಾಲೂಕಿನ ತಾವರಗೇರಾ ಪಟ್ಟಣದ ವ್ಯಾಪ್ತಿಯ ಕಲ್ಮಳ್ಳಿ ತಾಂಡದಲ್ಲಿ ಬುಧವಾರ ಸಂಜೆ 6.00 ಗಂಟೆ ಸುಮಾರಿಗೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿರುವ ಧ್ವಜಾರೋಹಣ ಕಂಬ ಹತ್ತುವ ಸಂದರ್ಭದಲ್ಲಿ ಬಾಲಕನೋರ್ವ ಬಿದ್ದು ಮೃತ ಪಟ್ಟ ಘಟನೆ ಜರುಗಿದೆ.

ಮೃತ ಬಾಲಕನನ್ನು ೭ ವರ್ಷದ ಬಾಲಕ ಪ್ರಕಾಶ ತಂದೆ ಚವಾಣ ಎಂದು ಗುರುತಿಸಲಾಗಿದೆ.

ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಿಂದ ಆಚರಿಸಲು ಕಲ್ಮಳ್ಳಿ ತಾಂಡದ ಸರ್ಕಾರಿ ಶಾಲೆಯಲ್ಲಿ ಸಿದ್ದತೆ ನಡೆಸಿ ಮನೆಗೆ ತೆರಳಿದ್ದರು. ಸಂಜೆ ಆರು ಗಂಟೆ ಸುಮಾರಿಗೆ ಶಾಲೆಯ ಆವರಣದಲ್ಲಿ ಆಡುತ್ತಿದ್ದ ಪ್ರಕಾಶ ಎನ್ನುವ ಎಳು ವರ್ಷದ ಬಾಲಕ ಧ್ವಜಾರೋಹಣ ಕಂಬ ಹತ್ತುವ ಸಂದರ್ಭದಲ್ಲಿ ಬಿದ್ದು ಮೃತ ಹೊಂದಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ತಾವರೆಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ಮಾಡಲಾಗಿದೆ ಎಂದು ಪಿಎಸ್‌ಐ ನಾಗರಾಜ್ ಕೊಟಗಿ ತಿಳಿಸಿದ್ದಾರೆ.

ಮೃತ ಬಾಲಕ ಕಲ್ಮಳಿ ತಾಂಡದ ತನ್ನ ದೊಡ್ಡಪ್ಪನ ಮನೆಯಲ್ಲಿ ವಾಸವಿದ್ದ ಎನ್ನಲಾಗಿದೆ. ಬಾಲಕನ ತಂದೆ-ತಾಯಿಯರು ದುಡಿಯಲು ದೂರದ ಹಾಸನಕ್ಕೆ ತೆರಳಿದ್ದಾರೆ. ವಿಷಯ ತಿಳಿದು ಈಗ ಸ್ವಗ್ರಾಮಕ್ಕೆ ಆಗಮಿಸುತ್ತಿದ್ದಾರೆ.

ವರದಿ : ರವಿಚಂದ್ರ ಬಡಿಗೇರ 

Read All News