ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ರಾಷ್ಟ್ರೀಯ ಕೊಡವ ಮಂಡಳಿ ನಿಯೋಗ

  • Shivaraj Bandigi
  • 14 Jan 2024 , 10:42 PM
  • Bengaluru
  • 195

ಬೆಂಗಳೂರು : ಕೊಡವ ಬುಡಕಟ್ಟು ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು  ಕುಲಶಾಸ್ತ್ರೀಯ ಅಧ್ಯಯನ ನಡೆಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದರು.

ಶಾಸಕ ಎ. ಎಸ್.ಪೊನ್ನಣ್ಣ ಅವರ ನೇತೃತ್ವದಲ್ಲಿ ಕೊಡವ ರಾಷ್ಟ್ರೀಯ ಮಂಡಳಿಯ ನಿಯೋಗವು ಇಂದು  ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.

ಕೊಡಗರು  ಎಂದು ನಮೂದಾಗಿರುವ ಕೊಡವ ಸಮುದಾಯದ ಹೆಸರನ್ನು  .
ಕೊಡವ ಎಂದು ತಿದ್ದುಪಡಿ ಮಾಡಿ ಗೆಜೆಟ್ ಅಧಿಸೂಚನೆ ಹೊರಡಿಸಲು ಕೂಡ ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
 
ಕೊಡವ ರಾಷ್ಟ್ರೀಯ ಮಂಡಳಿ  ಎನ್.ಯು ನಾಚಪ್ಪ ಅವರ ನೇತೃತ್ವದ 30 ಜನರ ನಿಯೋಗ ಹಾಗೂ  ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ, ಕೆ.ಟಿ. ಪೆಮ್ಮಯ್ಯ,  ಉಪಾಧ್ಯಕ್ಷರಾದ  ಕರ್ನಲ್ ವಿವೇಕ್ ಮುತ್ತಣ್ಣ, ಮತ್ತಿತರರು  ಉಪಸ್ಥಿತರಿದ್ದರು.

Read All News