ಅಂಗವಿಕಲನಿಗೆ ಬೇಕಿದೆ ಆಸರೆಯ ಭಾಗ್ಯ

  • 14 Jan 2024 , 10:16 PM
  • Belagavi
  • 235

ಅಥಣಿ :ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಶಂಕರಹಟ್ಟಿ ಗ್ರಾಮದ ಮುರಗೇಶ ಅಗಸರ (22) ಹುಟ್ಟಿನಿಂದ ಅಂಗವಿಕಲನಾಗಿದ್ದು ನಡೆಯಲು ಸಾಧ್ಯವಾಗದ ಸ್ಥಿಯಲ್ಲಿ ಸಂಕಟ ಪಡುತ್ತಿರುವ ಈತನಿಗೆ ತ್ರಿಚಕ್ರ ಬೈಸೈಕಲ್ ವೆವಸ್ಥೆ ಕಲ್ಪಿಸುವಂತೆ ಮನವಿ ಮಾಡಿದ್ದಾನೆ 

ತಂದೆ ತಾಯಿ ದಿನಂಪ್ರತಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುವ ಬಡ ಕುಟುಂಬದಲ್ಲಿ ಜನಿಸಿದ ಈ ವಿಕಲಚೇತನನಿಗೆ ಸಹಾಯ ಬೇಕಾಗಿದೆ

ರಾಜ್ಯಸರ್ಕಾರದ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರ ಇಲಾಖೆ ಎಲ್ಲಿ ಮರೆಯಾಯಿತೇ?

ಚಿಕ್ಕೋಡಿ ಉಪವಿಭಾಗದಲ್ಲಿ ಸಾಕಷ್ಟು ಅಂಗವಿಕಲರಿಗೆ ಮೂಲಭೂತ ಸೌಕರ್ಯದ ಕೊರತೆ ಎದ್ದು ಕಾಣುತ್ತಿದೆ

ಹುಟ್ಟುಹಬ್ಬಕ್ಕೆ ಲಕ್ಷಾಂತರ ರೂ ಖರ್ಚು ಮಾಡುವ ಪ್ರತಿಷ್ಟಾವಾದಿಗಳು ಯಾಕೆ ಕಂಡು ಕಾಣದ ಹಾಗೆ ಜಾಣಮೌನ ವಹಿಸಿದ್ದಾರೆ

ತುಕ್ಕು ಹಿಡಿದ ಮುರುಕಲು ಸೈಕಲ್ ನಲ್ಲಿ ಸಾಗಲು ಈ ಬಡ ಪಾಯಿಗೆ ಸಾಕಷ್ಟು ಸಮಸ್ಯೆಯಾಗುತ್ತಿದ್ದೂ ಯಾರಾದರೂ ನನಗೆ ಒಂದು ಸೈಕಲ್ ನೀಡಿ ಎಂದು ಅಂಗಲಾಚಿದ ವಿಕಲಚೇತನ ಯುವಕ ಮುರಗೇಶ್ ಅಗಸರ.

ಈ ಅಂಗವಿಕಲನ ಕಣ್ಣಿರಿನ ಕರುನಾಜನಕ ಕಥೆಗೆ ಯಾರ
ಕರುಳು ಕರುಗುತ್ತಾ ಒಂದು ಸೈಕಲ್ ವೆವಸ್ಥೆ ಕಲ್ಪಿಸಬಲ್ಲರಾ
ಅನ್ನೋದನ್ನ ಕಾದು ನೋಡಬೇಕಾಗಿದೆ.

Read All News