ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಮನೆ ಮಾಡಿದ ಕನ್ನಡ ಹಬ್ಬದ ಸಂಭ್ರಮವನ್ನು ಬೆಳಗಾವಿ ನಗರದ ಚೆನ್ನಮ್ಮ ವೃತ್ತದಲ್ಲಿ ಕನ್ನಡಿಗರು ಸಂಭ್ರಮಾಚರಣೆಯಿಂದ ಚಾಲನೆ ನೀಡಿದರು.
ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆ ಕೇಕ್ ಕಟ್ ಮಾಡಿ ಸಂಭ್ರಮಿಸಿದ ಕುಂದಾನಗರಿ ಜನ. ಬೆಳಗಾವಿ ಚನ್ನಮ್ಮ ವೃತ್ತದಲ್ಲಿ ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಹಾಗೂ ರಾಜಕುಮಾರ ಟೋಪಣ್ಣವರ ನೇತೃತ್ವದಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದರು.
ಪುನೀತ್ ಭಾವಚಿತ್ರ ಇರೋ ಕೇಕ್ ತಂದ ಅಭಿಮಾನಿಗಳು. ಕೇಕ್ ಕತ್ತರಿಸಿ ಕನ್ನಡ ರಾಜ್ಯೋತ್ಸವಕ್ಕೆ ಚಾಲನೆ ಚನ್ನಮ್ಮ ವೃತ್ತದಲ್ಲಿ ಕಿಕ್ಕಿರಿದು ಸೇರಿದ ಜನಸ್ತೋಮ ನೆರವೆರಿತ್ತು. ಕನ್ನಡ ಬಾವುಟ ಹಿಡಿದು ಜೈಕಾರ ಹಾಕಿದ ಕನ್ನಡಾಭಿಮಾನಿಗಳು. ಕುಂದಾನಗರಿ ಬೆಳಗಾವಿ ಕನ್ನಡ ರಾಜ್ಯೋತ್ಸವದಲ್ಲೂ ಪುನೀತ್ ಹವಾ ಜೋರಾಗಿತ್ತು.