ಅಥಣಿ :
ಇತ್ತೀಚಿನ ದಿನಗಳಲ್ಲಿ ಬಹುತೇಕ ರೈತರು ದ್ವಿಗುಣ ಆದಾಯಕ್ಕೆ ಸಾವಯುವ ಪದ್ಧತಿ ಮರೆತು ರಾಸಾಯನದತ್ತ ಮುಖ ಮಾಡುತ್ತಿದ್ದಾರೆ ಆದರೆ ಭಾರಪುರ ಇಳುವರಿ ಜೊತೆಗೆ ಹಲವು ರೋಗಗಳನ್ನ ಆಹ್ವಾನಿಸುತ್ತಿರುವುದು ಅಷ್ಟೇ ವಾಸ್ತವಿಕವಾಗಿದೆ ಇವುಗಳ ಮದ್ಯ ಬೇರೆಳೆನಿಕೆಯಷ್ಟು ರೈತರು ಇನ್ನು ನಮ್ಮ ಹಿರುಯರು ಬೆಳೆಸಿಕೊಂಡು ಬಂದ ಹಳೆಯ ಕೃಷಿ ಪದ್ಧತಿ ಅಳವಡಿಕೆ ಮಾಡೋ ರೈತರು ಇದ್ದಾರೆ.
ಹೌದು ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ನದಿ ಇಂಗಳಗಾಂವ ಗ್ರಾಮದ ಧನಪಾಲ ಚನ್ನಗೌಡರ ಎಂಬ ರೈತ ತನ್ನ ಒಂದು ಎಕರೆ ಭೂಮಿಯಲ್ಲಿ ಸೇನಬು ಬೆಳೆದು ಸಾವಯುವ ಕೃಷಿಎಡೆಗೆ ಧಾಪುಗಲು ಇಡುತ್ತಿದ್ದಾನೆ.
ರೈತ ಧನಪಾಲ ಚನ್ನಗೌಡರ ಹಿಂದಿನಿಂದಲೂ ತಮ್ಮ ಕೃಷಿ ಕಾಯಕದಲ್ಲಿ ಸಾವಯುವ ಪದ್ಧತಿ ಅಳವಡಿಸಿ ಅರೋಗ್ಯಯುತ ಆಹಾರ ಉತ್ತಮ ಆದಾಯ ತೆಗೆಯುತ್ತಿದ್ದಾರೆ ಈ ಸೇನಬು ಬೀಜವನ್ನ ತಾಲೂಕಿನ ಉಗಾರ್ ಪಟ್ಟಣದಿಂದ ಪ್ರತಿ ಕೆ ಜಿ ಗೆ 80 ರೂ ನಂತೆ 20 ಕೆಜಿ ಬೀಜ ತಂದು ಒಂದು ಎಕರೆ ಭೂಮಿಯಲ್ಲಿ ಬಿತ್ತನೆ ಮಾಡಿದ್ದಾರೆ ಕೇವಲ ಮೂರು ಬಾರಿ ನೀರು ಯೂನಿಸಿ ಈಗ 30 ದಿನ ಕಳೆದಿವೆ ಕೇವಲ 46 ದಿನಗಳ ಬೆಳೆಯಾದ ಸೇನಬು ಕಾಯಿ ಗಟ್ಟುವ ಮೊದಲೇ ಟ್ರೈಕ್ಟರ್ ರೂಟರ್ ವೇಟರ್ ಮೂಲಕ ಗದ್ದೆಯಲ್ಲಿ ನಾಶಪಡಿಸಿ ರಂಟೇ ಹೊಡೆಯುವುದರಿಂದ ಭೂಮಿಗೆ ಉತ್ತಮ ಹಸಿ ಗೊಬ್ಬರ ನೀಡಬಹುದಾಗಿದೆ.
70 ರ ದಶಕದ ಹಿಂದಿನ ಕೃಷಿ ಪದ್ಧತಿಯಲ್ಲಿ ತೋಟ, ಗದ್ದೆಗಳಲ್ಲಿ ಪ್ರಮುಖ ಬೆಳೆ ಬೆಳೆಯುವ ಮುನ್ನ ದ್ವಿದಳ ಧಾನ್ಯಗಳನ್ನು, ಹಸಿರೆಲೆ ಗೊಬ್ಬರ ಬೆಳೆಗಳನ್ನು ಬೆಳೆಸಿ, ಭೂಮಿಗೆ ಬೆರೆಸುವ ಪದ್ಧತಿ ಇತ್ತು. ವಿಪರೀತ ರಸಗೊಬ್ಬರ ಬಳಕೆ ಆರಂಭವಾದ ಮೇಲೆ, ಸೆಣಬು ಬೆಳೆಸುವುದು ನಿಂತು ಹೋಯಿತು. ದಶಕಗಳಿಂದೀಚೆಗೆ ಸಾವಯವ ಕೃಷಿಕರು ಈ ಬೆಳೆಗಳನ್ನು ಬಳಕೆ ಮುಂದುವರೆಸಿದರು.
ಈಗ ಅನೇಕ ರೈತರು ಎಕರೆಗಟ್ಟಲೆ ಸೆಣಬು ಬೆಳೆಯುತ್ತಿದ್ದಾರೆ. ರಾಸಾಯನಿಕ ಕೃಷಿ ಮಾಡುವವರೂ ಮೊದಲು ಈ ಬೆಳೆಗಳನ್ನು ಬೆಳೆಸಿ, ಭೂಮಿಗೆ ಬೆರೆಸಿ, ಆ ಮೇಲೆ ಭತ್ತ, ಕಬ್ಬಿನಂತಹ ಬೆಳೆ ಬೆಳೆಯುತ್ತಾರೆ.
ವರದಿ : ರಾಹುಲ್ ಮಾದರ