ನಿರಾಳ ತಂದ ಮಳೆರಾಯ

  • shivaraj bandigi
  • 11 May 2024 , 5:51 PM
  • Belagavi
  • 327

ಬೈಲಹೊಂಗಲ :  ಇಂದು ಜಿಲ್ಲೆಯ ಜನರಿಗೆ ಖುಷಿಯೋ ಖುಷಿ, ಕಾರಣ ಇಷ್ಟೇ ಎಂದೂ ಕಾಣದ ಮಳೆಯ ಕಂಡಾಗ ಚಿಕ್ಕಮಕ್ಕಳ ಸಹಿತ ದೊಡ್ಡವರು ಕೂಡಾ ಸಂಭ್ರಮ ಪಡುವಂತಹ ಕ್ಷಣ. 

ಕಳೆದ ವರ್ಷ ಮರೆಯಾದ ವರುಣ ಇಂದು ಕಣ್ಣು ಮುಂದೆ ಬಂದು ನಿಂತಾಗ ಎಲ್ಲರ ಮೊಗದಲಿ ಆನಂದವೋ ಆನಂದ. ಸತತ ಬಿಸಿಲಿನ ತಾಪ ತಾಳಲಾರದೆ ತಂಪುಪಾನೀಯ ಮೊರೆ ಹೋಗುತ್ತಿರುವ ಜನರಿಗೆ ಮಳೆರಾಯ ಕೊಂಚ ತಂಪೆರೆದು ನೆಮ್ಮದಿಯ ಉಸಿರು ಬಿಡುವಂತೆ ಮಾಡಿದ್ದಾನೆ. 

ಪ್ರವಾಹ, ಅತೀ ಪ್ರವಾಹ ನೋಡಿದ್ದೇವಿ, ಕೇಳಿದ್ದೇವಿ ಆದರೆ ಅತಿ ಬಿಸಿಲು ದಾಖಲಾಗಿರುವದು ಮಾತ್ರ ಈ ವರ್ಷವೇ ಮಾತ್ರ. ದಾಖಲೆ ಬರೆದ ಬಿಸಲಿಗೆ ಶೆಡ್ಡು ಹೊಡೆದಂತೆ ಇಂದು ಸುರಿದ ಮಳೆಗೆ ನಿರಾಳವಾದ ಜನರ ಮೊಗದಲಿ ಮಂದಹಾಸ ಮೂಡಿದೆ.

ಎಲ್ಲಿ ನೋಡತೇರಿ ಅಲ್ಲಿ ಬರೇ ಬಿಸಿಲು, ಬಿಸಿಗಾಳಿ. ಯಾರ ಊರಿಗೆ ಹೋದ್ರೂ ಇಲ್ಲಿ ಮಳಿ ಆಗಿಲ್ಲ, ಅಲ್ಲಿ ಮಳಿ ಆಗಿಲ್ಲ ಅಂತ ಇದ ಕೇಳೂದ ಆತ, ಆದ್ರ ಇವತ ಏನೋ ಸ್ವಲ್ಪ ನೆಮ್ಮದಿ ಸಿಕ್ಕಂಗ ಆಗೇತಿ...‌ 

ಅಕ್ಷತಾ. ಶಿವಾನಂದ, ಬಿ. ಪ್ರಿಯಾಂಕಾ ಗೃಹಣಿಯರು

ವರದಿ  : ರವಿಕಿರಣ್   ಯಾತಗೇರಿ

Read All News