ಅಖಂಡ ಬೆಳಗಾವಿ ಜಿಲ್ಲೆ ಆಗ್ರಹಿಸಿ ಬೈಲಹೊಂಗಲದಲ್ಲಿ ಏಕಾಏಕಿ ರಸ್ತೆ ತಡೆದು ಪ್ರತಿಭಟನೆ

  • shivaraj bandigi
  • 14 Jan 2024 , 9:48 PM
  • Belagavi
  • 518

ಬೈಲಹೊಂಗಲ : ಸರಕಾರ ಬೆಳಗಾವಿ ಜಿಲ್ಲೆಯನ್ನು ಅಖಂಡವಾಗಿಡಬೇಕು, ಜಿಲ್ಲೆ ವಿಭಜನೆ ಯಾಗುವುದಾದರೆ ಉಪ ವಿಭಾಗ ಕೇಂದ್ರಗಳನ್ನು ಜಿಲ್ಲಾ ಕೇಂದ್ರಗಳನ್ನಾಗಿ ಘೋಷಣೆ ಮಾಡಬೇಕು,ಇಲ್ಲವಾದಲ್ಲಿ ಸರಕಾರ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಸರ್ಕಾರಕ್ಕೆ ಸರಕಾರಕ್ಕೆ ಎಚ್ಚರಿಕೆ ನೀಡದರು. 

ಶಾಖಾ ಮುರುಸಾವಿರ ಮಠದ ಪ್ರಭು ನೀಲಕಂಠ ಸ್ವಾಮೀಜಿ, ವೇದಮೂರ್ತಿ ಡಾ. ಮಹಾಂತಯ್ಯಾ ಶಾಸ್ತ್ರೀ ಆರಾದ್ರಿಮಠ ಸಾನಿಧ್ಯದಲ್ಲಿ ಬೈಲಹೊಂಗಲ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಶಿವರಂಜನ ಬೋಳನ್ನವರ ನೇತೃತ್ವದಲ್ಲಿ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಮುಖಂಡರಾದ ಮಹಾಂತೇಶ ತುರಮರಿ,ವಿರೂಪಾಕ್ಷ ವಾಲಿ, ಮಹಾಂತೇಶ ಮತ್ತಿಕೊಪ್ಪ,ರಾಜು ಕೂಡಸೋಮಣ್ಣವರ, ಸೋಮನಾಥ ಸೊಪ್ಪಿಮಠ, ಶ್ರೀಶೈಲ ಯಡಳ್ಳಿ, ಸುಭಾಷ್ ತುರಮರಿ, ರವಿ ತುರಮರಿ ಹಾಗೂ ಬೈಲಹೊಂಗಲ ಜಿಲ್ಲಾ ಹೋರಾಟ ಸಮಿತಿ ಮುಖಂಡರು ಇದ್ದರು.

Read All News