ಯರಗಟ್ಟಿ: ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷದಿಂದ ಮೂರು ಎಕರೆ ಕಬ್ಬಿನ ಗದ್ದೆ ಸುಟ್ಟು ಕರಕಲಾಯಿತು
ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಯರಗನವಿ ಗ್ರಾಮದಲ್ಲಿ ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷದಿಂದ ವಿದ್ಯುತ್ ತಂತಿಯಿಂದಾಗಿ ಶಿವಬಸು ಅರಭಾಂವಿ, ಅವರ ಒಂದು ಎಕರೆ ಸಾವಿತ್ರಿ ಶ್ರೀಶೈಲ ಗೊಂಡಡಿ, ಅವರ ಎರಡು ಎಕರೆ ಕಬ್ಬಿನ ಗದ್ದೆ ಸುಟ್ಟು ಕರಕಲಾಯಿತು.
ರೈತರ ಹಣೆಬರಹ ಬಲ್ಲವರು ಯಾರಯ್ಯ ಇತ್ತ ಕಡೆ ಮಳೆರಾಯನು ಕೈಯಕೊಟ್ಟ ಇತ್ತ ಕಡೆ ಹಗಲು ರಾತ್ರಿ ಎನ್ನದೆ ಬೆಳೆದಿರುವ ಬೆಳೆಯನ್ನು ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷದಿಂದ ಕಬ್ಬಿನ ಗದ್ದೆ ಸುಟ್ಟುಹೋಯಿತು.
ಸಂಬಂಧಪಟ್ಟ ಅಧಿಕಾರಿಗಳಿಗೆ ಕೆಲವು ದಿನಗಳ ಹಿಂದೆ ವಿದ್ಯುತ್ ತಂತಿ ಜೋತಾಡುತ್ತಿದೆ ಎಂದು ಮಾಹಿತಿ ನೀಡಿದರು ಕೂಡ ರೈತರ ಮಾತಿಗೆ ಕಿವಿಗೂಡದೆ ರೈತರಿಗೆ ಬೆಲೆ ಇಲ್ಲದಂಗಾಯಿತಲ್ಲಯ್ಯ ಮೂರು ಎಕರೆ ಸುಟ್ಟ ಕಬ್ಬಿಣ ಗದ್ದೆಗೆ ಹೊಣೆ ಯಾರಯ್ಯ.
ವಿದ್ಯುತ್ ಅವಘಡದಿಂದ ಕಬ್ಬಿಗೆ ಗದ್ದೆಗೆ ಬೆಂಕಿ ಹತ್ತಿದ ತಕ್ಷಣ ಸಂಬಂಧಪಟ್ಟ ಹೆಸ್ಕಾಂ ಸಿಬ್ಬಂದಿಗೆ ಕರೆ ಮಾಡಿದರು ಕೂಡ ಯಾವುದೇ ತರಹ ರೈತನಿಗೆ ಹೆಸ್ಕಾಂ ಅಧಿಕಾರಿಗಳು ಸ್ಪಂದಿಸಲಿಲ್ಲ, ಯರಗಟ್ಟಿಯ ಅಗ್ನಿಶಾಮಕ ದಳದವರಿಗೆ ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ದೌಡಾಯಿಸಿ ಬಂದು ಬೆಂಕಿಯನ್ನು ನುಂದಿಸಿದರು.
ನಂತರ ಯರಗಟ್ಟಿ ತಲಾಟಿ ದೀಪಾ ತೆಗೂರ್ ಅವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು ಅಲ್ಲಿನ ಹೆಸ್ಕಾಂ ಅಧಿಕಾರಿಗಳು ಘಟನೆ ನಡೆದ ಸ್ಥಳಕ್ಕೆ ಬರಲು ಹಿಂದೇಟು ಹಾಕಲು ಕಾರಣವೇನು ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳೇ ಉತ್ತರ ನೀಡಬೇಕು.
ದಗದಗನೆ ಹತ್ತಿ ಉರಿದ ಕಬ್ಬಿಣ ಗದ್ದೆಯನ್ನು ನೋಡಿದ ತಕ್ಷಣ ರೈತನ ಆಕ್ರಂದ ಮುಗಿಲು ಮುಟ್ಟಿತು ರೈತರ ಕಣ್ಣೀರು ಒರಿಸ್ಸವರು ಯಾರಯ್ಯ ಇನ್ನು ಮುಂದಾದರೂ ಹೆಸ್ಕಾಂ ಅಧಿಕಾರಿಗಳು ಇಂತಹ ಘಟನೆ ನಡೆದುಕೊಳ್ಳದ ಹಾಗೆ ಎಚ್ಚೆತ್ತುಕೊಳ್ಳಬೇಕು.