ಕಾಲು ಜಾರಿ ಕಾಲುವೆಗೆ ಬಿದ್ದು ಯುವಕನ ಸಾವು

  • shivaraj B
  • 12 Sep 2024 , 2:11 PM
  • Athani
  • 671

ಅಥಣಿ : ಶೌಚಕ್ಕಾಗಿ ಕಾಲುವೆ ಹೋಗಿ ಕಾಲು ಜಾರಿ ಕಾಲುವೆಯಲ್ಲಿ  ಬಿದ್ದು ಯುವಕನೋರ್ವ ಸಾವನ್ನಪ್ಪಿರುವ ಘಟನೆ  ಹಲ್ಯಾಳ ಗ್ರಾಮದ ಕರಿಮಸುತಿ ಏತ ನೀರಾವರಿ ಕಾಲುವೆಯಲ್ಲಿ ನಡೆದಿದೆ. 

ಶಿವರಾಯ ಮಲ್ಲಪ್ಪ ಕಾಂಬಳೆ (21) ಮೃತಯಾದ  ದುರ್ದೈವಿ ಇಬ್ಬರು ಸ್ನೇಹಿತರ ಜೊತೆಯಲ್ಲಿ ಮುಂಜಾನೆ ಕಾಲುವೆಯ ಮೇಲೆ ಶೌಚಕ್ಕೆ ತೆರಳಿದ್ದರು, ಶೌಚಕ್ಕೆ ನೀರು ತರಲು ಮುಂದಾದಾಗ ಶಿವರಾಯ ಕಾಲುಜಾರಿ ಕಾಲುವೆಗೆ ಬಿದ್ದಿದ್ದಾನೆ. ಈಜು ಬಾರದ ಕಾರಣ  ಶಿವರಾಯ ರಭಸವಾಗಿ ಹರಿಯುತ್ತಿರುವ ನೀರು ಪಾಲಾಗಿದ್ದಾನೆ. 

ಅಥಣಿ ಪೊಲೀಸರು,  ಅಗ್ನಿಶಾಮಕ ದಳದ ಸಿಬ್ಬಂದಿಯು  ಶೋಧ ಕಾರ್ಯ ನಡೆಸಿದಾಗ ಘಟನೆ ಸಂಭವಿಸಿದ  ಒಂದು ಕಿಲೋಮೀಟರ ದೂರದ  ಅಂತರದಲ್ಲಿ ಮೃತನ  ದೇಹಕ್ಕೆ ಪತ್ತೆಯಾಗಿದೆ. 

ಯುವಕನನ್ನು ಕಳೆದುಕೊಂಡ  ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟುವಂತಿತ್ತು, ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವರದಿ : ರಾಹುಲ್  ಮಾದರ 

Read All News