ಅಥಣಿ : ಜಮೀನಿನಲ್ಲಿರುವ ಮೋಟಾರನ್ನು ಚಾಲು ಮಾಡಲು ಹೋಗಿ ವಿದ್ಯುತ ಸ್ಪರ್ಶಿಸಿ ಯುವಕನೊಬ್ಬ ಮೃತಪಟ್ಟ ಘಟನೆ ಅಥಣಿ ತಾಲೂಕಿನ ತಾಂವಶಿ ಗ್ರಾಮದಲ್ಲಿ ಜರುಗಿದೆ.
ನಾಗನೂರ ಪಿಎ ಗ್ರಾಮದ ಸಂಗಪ್ಪ ತಳವಾರ್ (28) ಎಂಬ ವ್ಯಕ್ತಿ ಮೃತ್ ದುರ್ದೈವಿ, ಈತ ತಾಂವಶಿ ಗ್ರಾಮದಲ್ಲಿರುವ ಜಮೀನನ್ನು ಪಾಲುದಾರರಾಗಿ ಮಾಡಿಕೊಂಡಿದ್ದು ಮುಂಜಾನೆ ಮೋಟಾರ್ ಸ್ಟಾರ್ಟ್ ಮಾಡಲು ಹೋಗಿ ವಿದ್ಯುತ್ ಸ್ಪರ್ಶಿಸಿದೆ ಎನ್ನಲಾಗಿದೆ.
ಮೃತ ಸಂಗಪ್ಪ ಈತನಿಗೆ ಇಬ್ಬರು ಮಕ್ಕಳು, ಹೆಂಡತಿ ತಂದೆ ತಾಯಿ ಇದ್ದಾರೆ, ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದ ಮುಗಿಲು ಮುಟ್ಟಿದೆ. ಅಥಣಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವರದಿ : ರಾಹುಲ್ ಮಾದರ