ಅಥಣಿ :
ಎರಡು ದ್ವಿಚಕ್ರ ವಾಹನಗಳ ಮದ್ಯ ನಡೆದ ಅಪಘಾತದಲ್ಲಿ ಯುವನೋರ್ವ ಮೃತಪಟ್ಟು ಮತ್ತೋರ್ವನಿಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಗುಂಡೇವಾಡಿ - ಪಾರ್ಥನಹಳ್ಳಿ ಮದ್ಯದ ಜತ್ - ಜಾಂಬೋಟಿ ಮುಖ್ಯ ಹೆದ್ದಾರಿಯ ಎಚ್ ಪಿ ಪೆಟ್ರೋಲ್ ಬಂಕ್ ಹತ್ತಿರ ಸಂಭವಿಸಿದೆ.
ಮೃತ ಯುವಕನನ್ನು ಅಥಣಿ ತಾಲೂಕಿನ ಬಳ್ಳಿಗೇರಿ ಮಲ್ಲಯ್ಯ ಮಠಪತಿ (21) ಗುರುತಿಸಲಾಗಿದ್ದು,
ಇನ್ನೊಂದು ಬೈಕ್ ಸವಾರ ನೆರೆ ರಾಜ್ಯ ಮಹಾರಾಷ್ಟ್ರದ ವಜ್ರವಾಡ ಗ್ರಾಮದ ಯುವಕನಾಗಿದ್ದು ಆತನಿಗೆ ಗಂಭೀರವಾದ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಆಂಬುಲೆನ್ಸ್ ಅಥಣಿ ಪೊಲೀಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವರದಿ : ರಾಹುಲ್ ಮಾದರ