ರಸ್ತೆ ಅಪಘಾತ ಯುವಕ ಸ್ಥಳದಲ್ಲೆ ಸಾವು

  • Shivaraj Bandigi
  • 15 Jan 2024 , 1:02 AM
  • Belagavi
  • 470

ಅಥಣಿ : ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ರಡ್ಡೆರಟ್ಟಿ ಗ್ರಾಮದ ಹೊರವಲಯದಲ್ಲಿ ರಸ್ತೆ ಅಪಘಾತ ಸಂಭವಿಸಿದ್ದು ಓರ್ವ ಯುವಕ ಸ್ಥಳದಲ್ಲೆ ಸಾವಿಗೆಡಾಗಿದ್ದಾನೆ.

ರಡ್ಡೆರಟ್ಟಿ ಸಮೀಪದ ಘಟನಟ್ಟಿ ಕ್ರಾಸ್ ಬಳಿ ಗೂಡ್ಸ ವಾಹನ ಮತ್ತು ಬೈಕ್ ಮದ್ಯ ಅಪಘಾತ ಸಂಭವಿಸಿದ್ದು  ಗೂಡ್ಸ ವಾಹನದ ಟೈರ್ ಒಡೆದು ಬೈಕ್ ಸವರಾಣಿಗೆ  ಗುದ್ದಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೆ ಮೃತ ಪಟ್ಟಿದ್ದಾನೆ.

ನಿನ್ನೆ ಸಾಯಂಕಾಲ  ಸತ್ತಿ ಮಾರ್ಗದಿಂದ ಅಥಣಿ ಎಡೆಗೆ ಹೋಗುತ್ತಿದ್ದ ಬೈಕ್ ಸವಾರ ಶ್ರೀನಿವಾಸ್ ಪಂಚಾಳ (26) ಮೃತ ದುರ್ದೈವಿ ಯಾಗಿದ್ದು ಈತ ರಾಯಭಾಗ ತಾಲೂಕಿನ ಯಬರಟ್ಟಿ ಗ್ರಾಮದದ ಯುವಕ ಎಂದು ತಿಳಿದು ಬಂದಿದೆ ಈ ಸಂಬಂಧ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಖರಣ ಧಾಖಲಾಗಿದೆ.

Read All News