ಮಹಾನಗರ ಪಾಲಿಕೆ ವಿಚಾರ ಕೋರ್ಟ್ ಆದೇಶದ ಪ್ರಕಾರ ಆಕ್ಷನ್ ಆಗುತ್ತೆ ! ಸಚಿವ ಸತೀಶ ಜಾರಕಿಹೊಳಿ

  • shivaraj B
  • 28 Aug 2024 , 6:45 PM
  • Belagavi
  • 360

ಬೆಳಗಾವಿಬೆಳಗಾವಿ ಮಹಾನಗರ ಪಾಲಿಕೆ ಆರ್ಥಿಕ ದೀವಾಳಿ ವಿಚಾರವಾಗಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, 20 ಕೋಟಿ ರೂಪಾಯಿ ಠೇವಣಿ ಮಾಡಬೇಕು ಎಂದು ಕೋರ್ಟ್ ಆದೇಶ ಆಗಿದೆ.

ಎಸಿಯವರಿಗೆ ದುಡ್ಡು ಡಿಪಾಸಿಟ್ ಮಾಡಬೇಕು. ಹಿಂದಿನ  ಅಧಿಕಾರಿಗಳು ಮಾಡಿದ ತಪ್ಪಿನ ಬಗ್ಗೆ ಸರ್ಕಾರ ತನಿಖೆ ಮಾಡಬೇಕಿದೆ  ಎಂದರು. 

ಎನಾದರೂ  ಉಳಿಸಲು ಸಾಧ್ಯವಿದೆಯಾ ಎಂದು ಚರ್ಚೆ ಮಾಡುತ್ತಿದ್ದು, ಸ್ಮಾರ್ಟ್‌ ಸಿಟಿಯಿಂದ‌ ರಸ್ತೆ ಕಾಮಗಾರಿ ಮಾಡಿದೆ ಅದನ್ನ‌ ಮಹಾನಗರ ಪಾಲಿಕೆ ಮೇಲೆ ಹಾಕಿದ್ದು ತಪ್ಪು, ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಆಗಲೇಬೇಕು ಎಂದರು. 

ಕಾನೂನು ವಿಭಾಗದವರು ಕೋರ್ಟ್ ಗೆ ಹಾಜರಾಗದ ವಿಚಾರವಾಗಿ, ರಾಜಕೀಯ ಒತ್ತಡದಿಂದ ಹೇಗೆ ಬೇಕೊ‌ ಹಾಗೇ ಬರೆಸಿಕೊಟ್ಟಿದ್ದಾರೆ. ಆಡಳಿತ ಪಕ್ಷದವರು ಈ ಕುರಿತು ಚರ್ಚೆ ಮಾಡಬೇಕಿತ್ತು. ಹಿಂದೆಯೂ ಒಬ್ಬರೇ‌ ನಿರ್ಧಾರ ಮಾಡಿದ್ದರು  ಈಗಲೂ ಅದೇ ಆಗಿದೆ ಎಂದರು. 

ಪ್ರತಿ ಅಡಿಗೆ 30 ರಿಂದ 35 ಸಾವಿರ ರೂ ಹಣ ಫಿಕ್ಸ್ ಮಾಡಿದ ವಿಚಾರ‌ವಾಗಿ, ಈ ಬಗ್ಗೆ ಡಿಸಿಯವರು ತನಿಖೆ ನಡೆಸುತ್ತಿದ್ದಾರೆ. ಖಂಡಿತ  ಕ್ರಮ ಆಗುತ್ತೆ. ಸಂಬಂಧ ಪಟ್ಟ ಮಂತ್ರಿಯವರ ಗಮನಕ್ಕೆ ಇದನ್ನು  ತೆಗೆದುಕೊಡು ಬರುತ್ತೇನೆ ಎಂದರಲ್ಲದೆ.

ನಿನ್ನೆ ಮಹಾನಗರ ಪಾಲಿಕೆಯಲ್ಲಿ ತೆಗೆದುಕೊಂಡ ನಿರ್ಧಾರಕ್ಕೆ ನನ್ನ ಸಮ್ಮತಿಯಿಲ್ಲ ಕೋರ್ಟ್ ಆದೇಶವಾಗಿದೆ ಈಗ ಚರ್ಚೆ ಅಷ್ಟೆ ‌ಮಾಡಲು ಸಾಧ್ಯ ಎಂದರು. 

8 ಕೋಟಿ ಜಿಎಸ್ ಟಿ ಹಣ ಸಹ ಕೊಟ್ಟಿಲ್ಲ .ಅನುದಾನ ವಸೂಲಿ ಮಾಡುತ್ತಿಲ್ಲ ಎಂಬ ವಿಚಾರವಾಗಿ, 40 ಪರ್ಸಂಟ್ ವಸೂಲಿ ಮಾಡೋದು ಬಾಕಿ ಇದೆ ಕಾರ್ಪೋರೇಷನ್ ನವರು ಮಾಡಬೇಕು ಹಿಂದಿನ ಪಾಲಿಕೆ ಆಯುಕ್ತ ಜಗದೀಶ ಅವರ ವಿರುದ್ಧ ಡಿಸಿಯವರ ನೇತೃತ್ವದಲ್ಲಿ ಸಮಿತಿ ಮಾಡಿದ್ದಾರೆ ತನಿಖೆ ನಡೆಯಲಿ ಎಂದರು. 

ಸಿದ್ದರಾಮಯ್ಯ ರಾಜಿನಾಮೆ ವಿಚಾರವಾಗಿ ಮಾತನಾಡಿದ ಅವರು,  ಸಿದ್ದರಾಮಯ್ಯ ರಾಜೀನಾಮೆ ಕೊಡಲ್ಲ ಅಂತಾ ನಾವು  ಹೇಳಿದ್ದೇವೆ ಅವರು ಕೊಡಲ್ಲ‌.

ಬಿಜೆಪಿಯವರು ಕೊಡ್ತಾರೆ ಅಂತಾ ಹೇಳ್ತಿದ್ದಾರೆ , ನಾವು ಕೊಡಲ್ಲ ಅಂತಾ ಹೇಳುತ್ತಿದ್ದೇವೆ ಎಂದರು.

Read All News