ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯ ಚುನಾವಣೆಯ ಫಲಿತಾಂಶ ಬಂದು 13 ತಿಂಗಳಾದರೂ ಇಲ್ಲಿಯವರೆಗೂ ಮಹಾಪೌರ, ಉಪಮಹಾಪೌರ್ ಚುನಾವಣೆ ನಡೆಯದೆ ಇರುವುದು ನಾನಾ ಅನುಮಾನಕ್ಕೆ ಕಾರಣವಾಗುತ್ತಿದೆ.
ಹೌದು. ಬೆಳಗಾವಿ ಮಹಾನಗರ ಪಾಲಿಕೆಯ ಚುನಾವಣೆ ಪ್ರತಿ ಭಾರೀ ಭಾಷಾ ಆಧಾರಿತವಾಗಿ ನಡೆದುಕೊಂಡು ಬಂದಿದ್ದು ಎಲ್ಲರಿಗೂ ತಿಳಿದ ವಿಷಯ. ಮೊಟ್ಟ ಮೊದಲ ಬಾರಿಗೆ ಪಕ್ಷದ ಚಿಹ್ನೆಯಿಂದ ಮಹಾನಗರ ಪಾಲಿಕೆ ಚುನಾವಣೆ ನಡೆಸಬೇಕು ಎನ್ನುವ ಹಟವಾದಿತನ ಸಾಹುಕಾರರದ್ದಾಗಿತ್ತು. ಇದಕ್ಕೆ ಸಮ್ಮತಿ ಸೂಚಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್ ಬೆಳಗಾವಿ ನಗರ ಮರಾಠಾ ಮಂಗಲ ಕಾರ್ಯಾಲಯದ ಸಮಾವೇಶದಲ್ಲಿ ಈ ಬಾರಿ ಪಾಲಿಕೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಸ್ಪರ್ಧೆ ನಡೆಸುತ್ತಾರೆ ಎಂದು ಘೋಷಣೆ ಮಾಡಿದ್ದರು.
ಇದಕ್ಕಿನ ಮುನ್ನ ಹಿಂದಿನ ರಾಜ್ಯಸಭಾ ಸದಸ್ಯ, ಕೆಎಲ್ಇ ಕಾರ್ಯಧ್ಯಕ್ಷ ಡಾ. ಪ್ರಭಾಕರ ಕೋರೆ ಅವರು ಕನ್ನಡ ಸಾಹಿತ್ಯ ಭವನದ ಕಾರ್ಯಕ್ರಮ ಒಂದರಲ್ಲಿ ಬೆಳಗಾವಿ ಸೇರಿದಂತೆ ದೇಶದಲ್ಲಿ ಬಿಜೆಪಿ ಬಲಿಷ್ಠವಾಗಿದೆ. ಪಾಲಿಕೆ ಚುನಾವಣೆ ನಡೆದರೆ ಬಿಜೆಪಿ ಅಭ್ಯರ್ಥಿ ಸ್ಪರ್ಧೆ ಮಾಡುತ್ತಾರೆ ಎಂದು ಸುಳಿವು ನೀಡಿದ್ದು ಗಮನಾರ್ಹ.
ಪ್ರಸ್ತುತವಾಗಿ ಪಕ್ಷದಿಂದ ಚುನಾವಣೆ ನಡೆದು 13 ತಿಂಗಳು ಕಳೆದರೂ ಮಹಾಪೌರ, ಉಪಮಹಾಪೌರ ಚುನಾವಣೆ ನಡೆಯದೆ ಇರುವುದು ಸ್ವಪಕ್ಷದ ಶಾಸಕರ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರ ಹಾಕದೆ ಬಿಜೆಪಿಯ ನೂತನ ಸದಸ್ಯರು ಕೈ ಕೈ ಹಿಸಿಕೊಳ್ಳುವ ಪರಿಸ್ಥಿತಿ ಬಂದೊದಗಿದೆ.
ಪಾಲಿಕೆ ಚುನಾವಣೆಯ ಫಲಿತಾಂಶದ ಬಳಿಕ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಇನ್ನೂ ಒಂದು ವರ್ಷವಾದರೂ ಮಹಾಪೌರ ಆಯ್ಕೆ ನಡೆಯುವುದಿಲ್ಲ ಎಂದು ಭವಿಷ್ಯ ನುಡಿದಿದ್ದರು.ಅದು ಸತ್ಯವಾಗಿದೆ. ಆದರೆ ಪಾಲಿಕೆಯಲ್ಲಿ ಅನಧಿಕೃತವಾಗಿ ಮಹಾಪೌರ, ಉಪಮಹಾಪೌರ ಇದ್ದಾರೆ. ಅವರಿಗೆ ಕಾಂಗ್ರೆಸ್ ನಿಂದ ಗೌನ್ ಕೊಡುವುದಾಗಿ ಹೇಳಿದ್ದ ಕಾಂಗ್ರೆಸ್ ಇಲ್ಲಿಯವರೆಗೂ ನೀಡಿಲ್ಲ ಎನ್ನುವ ಮಾತು ಪಾಲಿಕೆಯಲ್ಲಿ ಅಧಿಕಾರ ಸ್ವೀಕರಿಸಿದ ಬಿಜೆಪಿಗರಿಂದಲೇ ಕೇಳಿ ಬರುತ್ತಿವೆ. ಸಾಹುಕಾರ್ ಹೇಳಿದ ಹಾಗೆ ಗೌನ್ ಕೊಟ್ಟರೆ ನಾವು ಮಹಾಪೌರ, ಉಪಮಹಾಪೌರ ಬಿಡಿ ಪಾಲಿಕೆಯ ಅಧಿಕೃತ ಸದಸ್ಯರಾಗುತ್ತೇವೆ ಎನ್ನುವ ಮಾತುಗಳು ಬಿಜೆಪಿ ಸದಸ್ಯರಿಂದಲೇ ಕೇಳಿ ಬರುತ್ತಿರುವುದು ವಿಶೇಷ.
ಒಟ್ಟಾರೆ ವಿಧಾನ ಸಭಾ ಚುನಾವಣೆ ಇನ್ನೂ ಆರು ತಿಂಗಳು ಬಾಕಿ ಇದೆ. ಅಷ್ಟರ ಒಳಗಾಗಿ ಪಾಲಿಕೆಯ ಮಹಾಪೌರ, ಉಪಮಹಾಪೌರ ಚುನಾವಣೆ ನಡೆಯುವುದು ಅನುಮಾನ. ಚುನಾವಣೆಯ ಅಸ್ತ್ರಕ್ಕಾಗಿ ಮಹಾಪೌರ, ಉಪಮಹಾಪೌರ ಚುನಾವಣೆ ನಡೆಸಿದರೂ ಅಚ್ಚರಿ ಪಡಬೇಕಿಲ್ಲ.