ಭಾರತದ ರಾಷ್ಟ್ರಗೀತೆ ಹಾಡಿ ಪ್ರಧಾನಿ ಮೋದಿಯವರ ಪಾದಕ್ಕೆ ನಮಸ್ಕರಿಸಿದ ಅಮೆರಿಕನ ಗಾಯಕಿ

  • Krishna Shinde
  • 15 Jan 2024 , 3:14 AM
  • world
  • 382

ಅಮೇರಿಕ :ಪ್ರಧಾನಮಂತ್ರಿ ಮೋದಿಯವರು ಮೂರು ದಿನಗಳ ಐತಿಹಾಸಿಕ ಅಮೇರಿಕಾ ಪ್ರವಾಸವನ್ನು ಮುಕ್ತಾಯಗೊಳಿಸುತ್ತಿರುವಂತೆಯೇ ಭಾರತದ ರಾಷ್ಟ್ರಗೀತೆಯನ್ನು ಹಾಡಿದ ಅಮೇರಿಕನ್ ಗಾಯಕಿ ಮೇರಿ ಮಿಲ್ಬೆನ್ ಅವರು ಪ್ರಧಾನಿ ನರೇಂದ್ರ ಮೋದಿಯವರ ಪಾದಗಳನ್ನು ಸ್ಪರ್ಶಿಸುವ ವಿಡಿಯೋ ವೈರಲ್ ಆಗಿದೆ. 

ಆಶೀರ್ವಾದ ಪಡೆಯುವ ಸಲುವಾಗಿ ಪಾದಗಳನ್ನು ಸ್ಪರ್ಶಿಸುವುದು ಭಾರತೀಯ ಸಂಸ್ಕೃತಿಯಾಗಿದೆ ಮತ್ತು ಅದನ್ನು ಅಮೇರಿಕನ್ ಕಲಾವಿದರೊಬ್ಬರು ಅಂತರಾಷ್ಟ್ರೀಯ ವೇದಿಕೆಯಲ್ಲಿ ಜಾರಿಗೆ ತಂದಿರುವುದು ಪ್ರಧಾನಿ ಮೋದಿಯವರನ್ನು ಶ್ಲಾಘಿದರು.

ಈ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸದಲ್ಲಿದ್ದು, ಜೂನ್ 21 ರಂದು ವಿಶ್ವಸಂಸ್ಥೆಯಲ್ಲಿ ನಡೆದ ವಿಶ್ವ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ್ದರು, ಇದರಲ್ಲಿ ನ್ಯೂಯಾರ್ಕ್‌ನಲ್ಲಿರುವ ಭಾರತದ ಹೈಕಮಿಷನ್ ಮೇರಿ ಮಿಲ್ಬೆನ್ ಅವರನ್ನು ವಿಶೇಷ ಅತಿಥಿಯಾಗಿ ಆಹ್ವಾನಿಸಿತು. ಮಿಲ್ಬೆನ್ ಪ್ರಧಾನಿಯವರೊಂದಿಗೆ ಮೊದಲ ಸಾಲಿನಲ್ಲಿ ಯೋಗಾಭ್ಯಾಸ ಮಾಡಿದರು. ಈ ಸಂತಸದ ಕ್ಷಣವನ್ನು ಮೇರಿ ಮಿಲ್ಬೆನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Read All News