ಜನರ ಗೋಳಾಟದ ಮದ್ಯೆ ಬಿಟ್ಟರೂ ಬಿಡದ ಮಳೆ

  • shivaraj B
  • 18 Jul 2024 , 10:14 AM
  • Bailhongal
  • 4045

ಬೈಲಹೊಂಗಲ :  ಜಿಟಿ, ಜಿಟಿ ಮಳೆ ಬಿಟ್ಟರೂ ಬಿಡದೆಂಬಂತೆ ಸುರಿಯುತ್ತಿದೆ. ಮಳೆರಾಯನ ಅರ್ಭಟದ ಮುಂದೆ ದೇವಸ್ಥಾಗಳು, ಶಾಲಾ ಕಾಲೇಜುಗಳು, ರಸ್ತೆ ಸೇತುವೆಗಳು ಸಂಪೂರ್ಣ ಬಂದ.

ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಸಾಲಿ ಕಲಿಯುಂಗಿಲ್ಲಾ, ದೇವ್ರ ಗುಡಿಗೆ ಹೋಗೂಂಗಿಲ್ಲ. ಮನಿ ಮಠಾ ಕಳಕೊಂಡಾವ್ರ ಗೋಳ ಕೇಳೂಂಗಿಲ್ಲ. ಎಲ್ಲವೂ ಮಳೆರಾಯಣ ಸನ್ನಿಧಿಗೆ ಅರ್ಪಣೆ ಮಾಡಿದಂಗೆ ಆಗೇದ. ಎಲ್ಲಿ ನೋಡಿದರೂ ನೀರು, ಒಮ್ಮೆ ಜಿಟಿ,ಜಿಟಿ ಮಳೆ ಮತ್ತೊಮ್ಮೆ ಜೋರಾದ ಮಳೆ ಇದು ಉತ್ತರ ಕರ್ನಾಟಕದ ಜನರ ಬದುಕು ಭವನೆಯಾಗಿದೆ. 

ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಸುರಿಯುತ್ತಿರುವ ಮಹಾಮಳೆಗೆ ಇತ್ತ ಉತ್ತರ ಕರ್ನಾಟಕದ ಭಾಗ ತತ್ತರಿಸಿ ಹೋಗಿದೆ. ಗಡಿಭಾಗಕ್ಕೆ ಅಂಟಿಕೊಂಡಿರುವ ಎರಡೂ ರಾಜ್ಯಗಳು ವರುಣನ ಅವಕೃಪೆಗೆ ತುತ್ತಾಗಬೇಕಿದೆ.  

ಇಂತಹ ಮಳೆಯ ವಾತಾವರಣ ಪಾಕೃತಿಕ ಸೌಂದರ್ಯವನ್ನು ಹೆಚ್ಚಿಸಿದೆ. ಎತ್ತ ಕಣ್ಣು ಹಾಯಿಸಿದರು ಹಸಿರೇ ಹಸಿರು ನೋಡೂಗರಿಗೆ ಹಬ್ಬವೆನಿಸಿದರೂ ಸಹ  ಮಳೆಯಿಂದ  ಯಾವುದೇ ಹಾನಿ ಸಂಭವಿಸದಿರಲಿ.

ವರದಿ  : ರವಿಕಿರಣ್   ಯಾತಗೇರಿ

Read All News