ಅಮ್ಮ ಪ್ರತಿಷ್ಠಾನದ ಸೇವೆ ಅನನ್ಯ: ಶಾಸಕ ಗಣೇಶ

  • 15 Jan 2024 , 6:39 AM
  • Belagavi
  • 183

ಬೆಳಗಾವಿ :ಶಿರಗಾವಿಯಿಂದ ಬಂದ ಬಾಳಾಸಾಹೇಬ ಉದಗಟ್ಟಿ ಅವರು, ಬೆಳಗಾವಿ ಜಿಲ್ಲೆಯಲ್ಲಿ ಬಂದು ಸಾಮಾಜ ಸೇವೆ ಮಾಡುತ್ತಿರುವುದು ಅಭಿಮಾನದ ಸಂಗತಿ ಎಂದು ಶಾಸಕ ಗಣೇಶ ಹುಕ್ಕೇರಿ ಹೇಳಿದರು.

ಭಾನುವಾರ ಶ್ರೀಮತಿ ರತ್ನಾಬಾಯಿ ಹಾಗೂ ಶ್ರೀ ಕಲ್ಲಪ್ಪ ಉದಗಟ್ಟಿ ಸಾಮಾಜಿಕ ಪ್ರತಿಷ್ಠಾನ, ಜಾನಕಿ ಸೇವಾ ಸಂಘ, ಎಂ.ಪಿ.ಫೌಂಡೇಶನ್, ಟಿವಿ 24 ಪ್ರೊ. ಮತ್ತು ಯು.ಕೆ.ಕನ್ನಡ ವಾಹಿನಿ ಸಂಯುಕ್ತ ಆಶ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಡಾ. ಪ್ರಭಾಕರ ಕೋರೆ ಅವರು ಶೈಕ್ಷಣಿಕ‌ ಕ್ಷೇತ್ರ, ವೈದ್ಯಕೀಯ ಸೇವೆ ಮಾಡುತ್ತಿದ್ದಾರೆ. ಅದರಂತೆ ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ ‌ಹುಕ್ಕೇರಿ ಅವರು ಸಾಕಷ್ಟು ರಾಜಕೀಯ, ಸಾಮಾಜಿಕ ಸೇವೆ ಮಾಡಿದ್ದಾರೆ ಎಂದರು.

ನಿಸ್ವಾರ್ಥ ಸೇವೆ ಸಲ್ಲಿಸುವ ಜನರು ಸಮಾಜದಲ್ಲಿ ಇದ್ದಾರೆ.  ತಂದೆ, ತಾಯಿಯ ಮೇಲೆ‌ ಪ್ರತಿಯೊಬ್ಬರು ಗೌರವ ಕೊಡಬೇಕು. ಅದರಂತೆ ಇಂದಿನ ಮಕ್ಕಳು ಸದೃಢ ಭಾರತಕ್ಕೆ ನಾಂದಿಯಾಗಬೇಕೆಂದರು.

ಅಮ್ಮ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಡಾ. ಬಾಳಾಸಾಹೇಬ ಉದಗಟ್ಟಿ ಮಾತನಾಡಿ,  ದೇಶದಲ್ಲಿ ಧಾನ, ಧರ್ಮಕ್ಕೆ ಮಹತ್ವ ಇದೆ. ಅಮ್ಮ ಪ್ರತಿಷ್ಠಾನದಿಂದ ಸಾಕಷ್ಟು ಸಮಾಜ ಸೇವೆ ಮಾಡಿಕೊಂಡು ಬಂದಿದ್ದೇವೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಅಮ್ಮ ಪ್ರತಿಷ್ಠಾನ ಪ್ರಶಸ್ತಿ ನೀಡಲಾಗಿದೆ ಎಂದರು.

ಹಣವಂತರು ಧಾನ, ಧರ್ಮ ಮಾಡುವುದರ ಮೂಲಕ ಉದಾರತೆ ಮೆರೆಯಬೇಕು. ಅದಾಂಗ ಮಾತ್ರ ಸಮಾಜ‌ ಸುಧಾರಣೆಯಾಗಲು ಸಾಧ್ಯವಾಗುತ್ತದೆ ಎಂದು ಕರೆ ನೀಡಿದರು.
ಕಳೆದ 20 ವರ್ಷದಿಂದ ಅಮ್ಮ ಪ್ರತಿಷ್ಠಾನದಿಂದ ರಕ್ತದಾನ, ಪ್ರವಾಹದ ಸಂದರ್ಭದಲ್ಲಿ ಜನರಿಗೆ ಸಹಾಯ ಮಾಡಿದ್ದೇವೆ. ಹಣ ಬರುತ್ತದೆ‌ ಹೋಗುತ್ತದೆ. ಧಾನ ಧರ್ಮದಿಂದ ದೇಶದಲ್ಲಿ ಸುಭದ್ರ ನೆಲೆ ಕಾಯುವಂತಾಗಿದೆ ಎಂದರು.

ಸುರೇಶ ಕೋರೆಕೊಪ್ಪ ಮಾತನಾಡಿ, ಅಮ್ಮ ಪ್ರತಿಷ್ಠಾನದಿಂದ ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ಗುರುತಿಸಿ ಗೌರವಿಸುತ್ತೊರುವುದು ಅಭಿಮಾನದ ಸಂಗತಿ. ಸಾಮಾಜಿಕ ‌ಕ್ಷೇತ್ರದಲ್ಲಿ ಸಾಧನೆ ಮಾಡಿ‌ದವರನ್ನು ಗುರುತಿಸುವುದು ಸಾಮಾನ್ಯ ಮಾತಲ್ಲ. ಅದನ್ನು ಅಮ್ಮ ಪ್ರತಿಷ್ಠಾನದ ಸಂಸ್ಥಾಪಕ ಬಾಳಾಸಾಹೇಬ ಮಾಡುತ್ತಿದ್ದಾರೆ ಎಂದರು.

ಧಾನ, ಧರ್ಮ ಮಾಡಿರುವರು ಅಸಮಾನ್ಯರು. ಎಷ್ಟೊ ಅಂತಸ್ತು ಇದ್ದರೂ ಸಾಮಾನ್ಯರಂತೆ ಬದುಕುತ್ತಿದ್ದಾರೆ. ಧಾನದಿಂದ ಸಮಾಜವನ್ನು ಬದಲಾವಣೆ ಮಾಡುವ ಶಕ್ತಿ‌ ಇದೆ. ಇದಕ್ಕೆ ಕಾರಣ ಸಿದ್ದಗಂಗಾ ಶಿವಕುಮಾರ ಸ್ವಾಮೀಜಿ, ಸಿದ್ದೇಶ್ವರ ಸ್ವಾಮೀಜಿ, ಪುನೀತ್ ರಾಜ್‍ಕುಮಾರ್ ಅವರ ಸಮಾಜ‌ ಸೇವೆ ಅನನ್ಯ ಎಂದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಸತ್ಕರಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಶರಣು ಗದ್ದುಗೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Read All News