ಅಥಣಿ:ಶಿಕ್ಷಣ ಕಲಿತಿರುವ ವ್ಯಕ್ತಿ ಭ್ರಷ್ಟ ಆಗಬಹುದು ಆದರೆ ಸಂಸ್ಕಾರ ಕಲಿತ ವ್ಯಕ್ತಿ ಭ್ರಷ್ಟ ಆಗಲಾರ ಎಂದು ಕಕಮರಿಯ ರಾಯಲಿಂಗೇಶ್ವರ ಮಠದ ಸದ್ಗುರು ಅಭಿನವ ಗುರುಲಿಂಗ ಜಂಗಮ ಮಹಾಸ್ವಾಮಿಜೀಗಳು ಹೇಳಿದರು ಅವರು ನದಿ ಇಂಗಳಗಾವ ಗ್ರಾಮದ ಗುರುಲಿಂಗ ದೇವರ ಮಠದಲ್ಲಿ ಹಮ್ಮಿಕೊಂಡ 63ನೇ ಮಹಾ ಶಿವರಾತ್ರಿಯ ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಕಲಿಯುವುದು ಬಹಳ ಮುಖ್ಯವಾಗಿದೆ ಅಲ್ಪಸ್ವಲ್ಪ ಇದ್ದ ದುಡ್ಡನ್ನು ಮುರುಗೇಂದ್ರ ಶಿವಯೋಗಿಗಳ ಮಠಕ್ಕೆ ದಾನ ಧರ್ಮ ಮಾಡಿದರೆ ಅದು ಮುಂದೊಂದು ದಿನ ಕಷ್ಟ ಕಾಲಕ್ಕೆ ಮುರುಘೇಶ ಕೈ ಹಿಡಿತಾನೆ ಅದಕ್ಕೆ ಬಂದುಗಳೆ ಯಾವಾಗಲೂ ಒಳ್ಳೆಯದೆ ಬಯಸಿ ಮೊಸಕ್ಕೆ ಕೊನೆ ಇದೆ ಆದರೆ ಸತ್ಯಕ್ಕೆ ಎಂದೆಂದು ಕೊನೆ ಇಲ್ಲ ಎಂದರು.
ಈ ವೇಳೆ ಧಾರವಾಡ ಮುರುಘಾ ಮಠದ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಶಶಿಕಾಂತ ಪಡಸಲಗಿ ಗುರುಜೀ ಸಿದ್ದಲಿಂಗ ಮಹಾಸ್ವಾಮಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು, ನಿರೂಪಣೆ ಶಿಕ್ಷಕರಾದ ಮಹಾಂತೇಶ ಗೂಳಪ್ಪನವರ ಹಾಗೂ ವಂದನಾರ್ಪನೆ ಉಮೇಶ ಯಳವಿ ಮಾಡಿದರು