ಮಾಜಿ ಜಿಪಂ ಸದಸ್ಯನ ಅಂದಾ ದರ್ಬಾರ್

  • 15 Jan 2024 , 2:28 AM
  • Belagavi
  • 196

ಚಿಕ್ಕೋಡಿ : ರಸ್ತೆಯನ್ನು ಅಗೆದು ಮಾಜಿ ಜಿಲ್ಲಾ ‌ಪಂಚಾಯತ ಸದಸ್ಯನ ಅಂಧಾ ದರ್ಬಾರ್ ನಡೆಸಿದ್ದಾ‌ರೆ. ತನ್ನ ಗದ್ದೆಯಲ್ಲಿ ನೀರು ನಿಲ್ಲುತ್ತೆ ಅಂತ ರಸ್ತೆಯನ್ನೆ ಅಗೆದ ಬಿಜೆಪಿ ಮಾಜಿ ಜಿಲ್ಲಾ ಪಂ ಸದಸ್ಯ ತಮ್ಮಣ್ಣ ತೇಲಿ ನಡೆಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರಡ‌.

ಶೇಗುಣಶಿ - ಯಬರಟ್ಟಿ ಸಂಪರ್ಕ ‌ಕಲ್ಪಿಸುವ ಜಿಲ್ಲಾ ಮುಖ್ಯ ರಸ್ತೆ ಅಗೆದ ತಮ್ಮಣ್ಣ, ನೀರು ಪಾಸ್ ಆಗಲೆಂದು ಕೆಳಗೆ ಪೈಪ್ ಲೈನ್ ಅವಳವಡಿಸಿ ಮೇಲೆ ರಸ್ತೆ ‌ಮಾಡಿದ್ದ ಅಧಿಕಾರಿಗಳು ಯಾರೋ ಕಿಡಿಗೇಡಿಗಳು ಪೈಪ್ ಒಳಗೆ ಕಲ್ಲು ಹಾಕಿದ್ದರಿಂದ ಬ್ಲಾಕ್ ಆದ ಪೈಪ್ ಲೈನ್.

ಪೈಪ್ ಲೈನ್ ಬ್ಲಾಕ್ ಆಗಿದ್ದಕ್ಕೆ ಕಳೆದ ಒಂದು ವಾರದ ಹಿಂದೆ ರಸ್ತೆ ಅಗೆದಿದ್ದ ತಮ್ಮಣ್ಣ ತಮ್ಮಣ್ಣನ ನಡೆಯಿಂದ ಬೇಸತ್ತ ಎರಡೂ ಗ್ರಾಮದ ಜನ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶೆಗುಣಶಿ ಹಾಗೂ ಯಬರಟ್ಟಿ ಗ್ರಾಮಗಳು ಕಳೆದ ಒಂದು ವಾರದಿಂದ ಸಂಪರ್ಕ ಸಾಧ್ಯವಾಗದೆ ಜನರ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮಾಜಿ ‌ಜಿ ಪಂ ಸದಸ್ಯನ ಆಟಾಟೋಪಕ್ಕೆ ಬೇಸತ್ತ ಜನ. ಜಿಪಂ ಸದಸ್ಯನ ದಾದಾಗಿರಿಗೆ ಹೆದರಿ ಕಣ್ಣು ಮುಚ್ಚಿ ಕುಳಿತಿರುವ ಜಿಲ್ಲಾ ಪಂಚಾಯತ ಅಧಿಕಾರಿಗಳ ನಡಗೆ ವ್ಯಾಪಕ ಟಿಕೆ ವ್ಯಕ್ತವಾಗುತ್ತಿದೆ.

Read All News